

ದೊಡ್ಡಬಳ್ಳಾಪುರ : ಅರ್ಕಾವತಿ ನದಿ ಹೋರಾಟ ಸಮಿತಿಯ ಸತತ ಹೋರಾಟದ ಫಲ ಬೆಂಗಳೂರಿನಲ್ಲಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಗೊಂಡಿದೆ. ಕಚೇರಿ ಉದ್ಘಾಟನೆಯಾಗಿ 12 ದಿನಗಳಾಗಿದ್ದು, ಉದ್ಘಾಟನೆ ದಿನ ಕಚೇರಿಗೆ ಹಾಕಿದ ಬೀಗ ಇನ್ನೂ ತೆಗೆದಿಲ್ಲ. ಹೀಗಾಗಿ ಅಧಿಕಾರಿಗಳ ರ್ನಿಲಕ್ಷ್ಯ ಖಂಡಿಸಿ ಹೋರಾಟಗಾರರು ಕಚೇರಿ ಮುಂದೆಯೇ ಬೂದುಕುಂಬಳ ಹೊಡೆದು ಪೂಜೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಹೋರಾಟಗಾರ ವಸಂತ್ ಮಾತನಾಡಿ, ಆ.20ರಂದು ಕಾಟಾಚಾರಕ್ಕೆ ಕಚೇರಿ ಉದ್ಘಾಟಿಸಲಾಗಿದೆ. ಪೂಜೆ ಮಾಡಿ ಹೋದ ಅಧಿಕಾರಿಗಳು ಇಲ್ಲಿಯವರೆಗೂ ಕಚೇರಿ ಬಾಗಿಲು ತೆಗಿದಿಲ್ಲ, ಅಧಿಕಾರಿಗಳಿಗೆ ದೃಷ್ಟಿಯಾಗಿದೆ ಎಂದು ಯಾರೋ ಹೇಳಿದ್ರು, ದೃಷ್ಟಿ ನಿವಾರಣೆಗಾಗಿ ಪೂಜೆ ಮಾಡಲಾಗಿದೆ. ಕಚೇರಿ ಬಾಗಿಲು ತೆಗೆಯದಿದ್ದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಶವಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖಂಡ ರಮೇಶ್ ಮಾತನಾಡಿ, ನಮ್ಮೂರಿನ ಕೆರೆ ಸಂರಕ್ಷಣೆಗಾಗಿ, ಶುದ್ಧ ನೀರಿಗಾಗಿ ನಾವು ಉರುಳು ಸೇವೆ, ಕಪ್ಪು ಪಟ್ಟಿ ಪ್ರದರ್ಶನ, ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ನಮ್ಮ ಹೋರಾಟ ಫಲ ಕಛೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಗೊಂಡಿದೆ, ಜಿಲ್ಲಾಧಿಕಾರಿ ಮತ್ತು ಶಾಸಕರ ಮಾತಿಗೂ ಬೆಲೆ ಕೊಡದ ಅಧಿಕಾರಿಗಳು ರ್ನಿಲಕ್ಷ್ಯ ತೋರಿಸಿದ್ದಾರೆ, ಅವರಿಗೆ ಕೆಲಸ ಮಾಡಲು ಇಷ್ಟ ಇಲ್ಲದಿದ್ದಾರೆ ರಾಜೀನಾಮೆ ಕೊಟ್ಟು ಹೋಗಲಿ, ನಿರುದ್ಯೋಗಿ ಯುವಕರಿಗೆ ಉದ್ಯೋಗವಾದರೂ ಸಿಗುತ್ತದೆ ಎಂದರು.
ಕೈಗಾರಿಕೆಗಳು ಬಿಡುವ ತ್ಯಾಜ್ಯ ನೀರನ್ನು ತಡೆದು ಪರಿಸರ ಕಾಪಾಡುವುದು ಸರ್ಕಾರದ ಕರ್ತವ್ಯ. ಮಾಲಿನ್ಯ ತಡೆಯುವ ಕಾರಣಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ರಚನೆಯಾಗಿದೆ. ಆದರೆ ಇದರಲ್ಲಿರುವ ಅಧಿಕಾರಿಗಳು ಕೈಗಾರಿಕೆಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ರ್ನಿಲಕ್ಷ$್ಯತೆಯಿಂದಾಗಿ ನಮ್ಮೂರಿನ ಕುಡಿಯುವ ನೀರು, ಸೇವಿಸುವ ಗಾಳಿ ವಿಷವಾಗಿದೆ. ಶ್ರೀ ಕಚೇರಿ ಪ್ರಾರಂಭವಾಗದಿದ್ದಾರೆ ಮುಖ್ಯ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. > ಸತೀಶ್ ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟಗಾರ