

ಕಾರಟಗಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದಲ್ಲಿನ ವಿವಿಧ ಮತಗಟ್ಟೆಗಳಿಗೆ ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಹಾಗೂ ಮತಗಟ್ಟೆ ವಲಯ ಅಧಿಕಾರಿ ಡಾ.ಸಿ.ಕಿಶೋರ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಮತಗಟ್ಟೆ ಅಧಿಕಾರಿಗಳ ಸಭೆ
ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಮಾತನಾಡಿ, ಪಟ್ಟಣದಲ್ಲಿ 25ಮತಗಟ್ಟೆಗಳು ಇರಲಿದ್ದು ಅವುಗಳಿಗೆ ಕುಡಿಯುವ ನೀರು, ನೆರಳು, ಶೌಚಗೃಹ, ವಿದ್ಯುತ್ ಸಂಪರ್ಕ ಸೇರಿ ಅಗತ್ಯ ಪೀಠೋಪಕರಣಗಳನ್ನು ಒದಗಿಸಲಾಗುವುದು.
ಮೂಲಸೌಲಭ್ಯಗಳ ಮೇಲುಸ್ತುವಾರಿಗೆ ತಂಡಗಳನ್ನು ರಚಿಸಿದ್ದು, ಚುನಾವಣಾ ಸಿಬ್ಬಂದಿ ಹಾಗೂ ಮತದಾರರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಅಗತ್ಯ ಕೆಲಸಗಳನ್ನು ತ್ವರೀತವಾಗಿ ಪೂರ್ಣಗೊಳಿಸಲು ಪುರಸಭೆ ಸಿಬ್ಬಂದಿ ಶ್ರಮವಹಿಸಲಿದ್ದಾರೆ ಎಂದು ತಿಳಿಸಿದರು.