ಜೋಶಿ ಪರ ಮತಯಾಚನೆ

h1-krantikiran
Published on

ಹುಬ್ಬಳ್ಳಿ: ನಗರದ ವಾರ್ಡ್ ನಂ.80ರ ನೇಕಾರ ನಗರ ಗಿರಿಯಾಲ ರಸ್ತೆಯಲ್ಲಿ ಪೂರ್ವ ಕ್ಷೇತ್ರದ ಬಿಜೆಪಿ ಸಂಚಾಲಕ ಡಾ. ಕ್ರಾಂತಿಕಿರಣ ಅವರು ಬುಧವಾರ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಮತಯಾಚನೆ ಮಾಡಿದರು.
ನಂತರ ಮಾತನಾಡಿದ ಅವರು, ಪ್ರಧಾನಿ ಮೋದಿ ಸಾಧನೆಗಳು, ದೇಶದಲ್ಲಾದ ಅಭಿವೃದ್ಧಿ ಕಾರ್ಯಗಳು, ಮಹತ್ತರ ಬದಲಾವಣೆಗಳು, ಜಗತ್ತಿನಲ್ಲಿ ಪ್ರಸ್ತುತ ಭಾರತ ಹೊಂದಿದ ಗೌರವ ಹಾಗೂ ಸ್ಥಾನಮಾನಗಳನ್ನು ತಿಳಿಸಿದರು. ಸಚಿವ ಪ್ರಲ್ಹಾದ ಜೋಶಿ ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ಮನದಟ್ಟು ಮಾಡಿ ಮತಯಾಚಿಸಿದರು.
ಮುಖಂಡರಾದ ಶಿವಯ್ಯ ಹಿರೇಮಠ, ರಾಮಲಿಂಗ ಸೇಲಂ, ಮಾರುತಿ ಸೊನ್ನದ, ಮಂಜುನಾಥ ತೇರದಾಳ, ಮಂಜುನಾಥ ಭಜಂತ್ರಿ, ಕಿರಣ ಕುಲಕರ್ಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net