ಎಲ್ಲ ಕಾಲದ ರಾಜಕೀಯ ಒಂದೇ ರೀತಿಯ ಹೊದಿಕೆ

h23-nagasudhe
Published on

ಹುಬ್ಬಳ್ಳಿ: ಪೌರಾಣಿಕ ವಸ್ತುವನ್ನು ಸಮಕಾಲೀನಗೊಳಿಸುವಲ್ಲಿ ನಾಟಕಕಾರ ವ್ಯಾಸ ದೇಶಪಾಂಡೆ ಯಶಸ್ವಿಯಾಗಿದ್ದಾರೆ. ಕುಮಾರವ್ಯಾಸನ ಭಾರತದಲ್ಲಿದ್ದಂತೆ ಉತ್ತರಕುಮಾರ ಕೇವಲ ವಿಡಂಬನಾತ್ಮಕ ಪಾತ್ರವಾಗಿ ಮೂಡದೇ ಅವನ ಪೂರ್ಣ ವ್ಯಕ್ತಿತ್ವ ಅನಾವರಣಗೊಂಡಿದೆ. ಎಲ್ಲ ಕಾಲದಲ್ಲೂ ರಾಜಕೀಯವು ಒಂದೇ ರೀತಿಯ ಹೊದಿಕೆಯುಳ್ಳದ್ದು. ನಾಟಕದ ವಸ್ತು ಸಮಕಾಲೀನ ಬದುಕಿಗೆ ಹತ್ತಿರವಾಗಿದೆ ಎಂದು ವಿಮರ್ಶಕ ಡಾ. ಶ್ಯಾಮಸುಂದರ ಬಿದರಕುಂದಿ ಅಭಿಪ್ರಾಯಪಟ್ಟರು.

ನಗರದ ನಾಗಸುಧೆ ಜಗುಲಿಯಲ್ಲಿ ಶನಿವಾರ ಏರ್ಪಡಿಸಿದ್ದ ‘ಕವಿ ಕಾವ್ಯ ಮಂಥನ’ ಕಾರ್ಯಕ್ರಮದಲ್ಲಿ ನಾಟಕಕಾರ ವ್ಯಾಸ ದೇಶಪಾಂಡೆ ಬರೆದ ಹೊಸ ನಾಟಕ ‘ಅಜ್ಞಾತ ಪರ್ವ’ದ ಕುರಿತು ಮಾತನಾಡಿದರು.

ನಂತರ ನಡೆದ ಸಂವಾದದಲ್ಲಿ ಭಾರತಿ ಹಿರೇಮಠ, ಸೋಮಶೇಖರ ಇಟಗಿ, ಎಸ್.ಆರ್. ಆಶಿ ಪಾಲ್ಗೊಂಡಿದ್ದರು. ಶಂಕರಗೌಡ ಸಾತ್ಮಾರ, ವೀಣಾ ಅಟವಳೆ, ಕುಸುಮಾ ಶೆಟ್ಟಿ, ಮಂಜು ಹೊಸ್ಮನೆ, ಎಸ್.ಅರುಂಧತಿ, ಅರುಣಕುಮಾರ ಹಬ್ಬು, ಗುರುಸಿದ್ದಪ್ಪ ಬಡಿಗೇರ, ವಿರೂಪಾಕ್ಷ ಕಟ್ಟಿಮನಿ, ಚಂದ್ರಶೇಖರ ಕೂಬಿಹಾಳ, ನಿವೇದಿತಾ ತುಮಕೂರು, ಶೈಲಜಾ ಕೊಪ್ಪಳ, ಇತರರಿದ್ದರು. ಪ್ರಕಾಶ ಕಡಮೆ ಸ್ವಾಗತಿಸಿದರು. ಸುನಂದಾ ಕಡಮೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net