ರಾಜಕೀಯ ಶೋಕಿಗಲ್ಲ ಸೇವೆಗೆ ಸೀಮಿತ- ಶಾಸಕ ಜೆ.ಎನ್.ಗಣೇಶ್ ಹೇಳಿಕೆ

Kampli Congress Meeting
ಕಂಪ್ಲಿಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು, ಕಾರ್ಯಕರ್ತರು ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿದರು.
Published on

ಕಂಪ್ಲಿ: ಪರಿಪೂರ್ಣ ತಾಲೂಕು ಕೇಂದ್ರವನ್ನಾಗಿ ರೂಪಿಸಲು ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು. ಇಲ್ಲಿನ ಬಿಎಸ್‌ವಿ ಶಾಲೆ ಆವರಣದಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು, ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ.ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ಭರವಸೆ ನೀಡಿದ್ದರು.

ಈಗ ಅವರು ಮುಖ್ಯಮಂತ್ರಿಯಾಗಿದ್ದು, ಅಭಿವೃದ್ಧಿಗೆ ಸ್ಪಂದಿಸಲಿದ್ದಾರೆ ಎಂದು ಹೇಳಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲ್ ಹಾಕಿದವರಿಗೆ ಕ್ಷೇತ್ರದ ಜನರು ಈಗಾಗಲೇ ಉತ್ತರ ನೀಡಿದ್ದಾರೆ. ರಾಜಕೀಯ ಶೋಕಿಗಾಗಿ ಅಲ್ಲ, ಅದು ಸೇವೆಗೆ ಸೀಮಿತವಾಗಿದೆ ಎಂದರು.

ಸಕ್ಕರೆ ಕಾರ್ಖಾನೆಯ 176 ಎಕರೆ ಜಮೀನು ಸರ್ಕಾರಕ್ಕೆ ಸೇರಿದೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಬೇಕು. ಕಂಪ್ಲಿ ತಾಲೂಕಿಗೆ ಬಿಇಒ ಕಚೇರಿ, ನ್ಯಾಯಾಲಯ, ಅಗ್ನಿಶಾಮಕ, ಡಬಲ್ ರಸ್ತೆಗಳ ನಿರ್ಮಾಣವಾಗಬೇಕು ಎಂದು ಪುರಸಭೆಯ ಸದಸ್ಯರು ಒತ್ತಾಯಿಸಿದರು.

ಪಟ್ಟಣದ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಬಿಎಸ್‌ವಿ ಶಾಲೆವರೆಗೆ ಶಾಸಕರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ಪುರಸಭೆ ಸದಸ್ಯರಾದ ಭಟ್ಟಪ್ರಸಾದ್, ಕೆ.ಎಸ್.ಚಾಂದ್‌ಬಾಷಾ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಕೆ.ಮಸ್ತಾನ್‌ಸಾಬ್, ಯುವ ಅಧ್ಯಕ್ಷ ಆರ್.ಪಿ.ಶಶಿಕುಮಾರ್, ಮಹಿಳಾ ಅಧ್ಯಕ್ಷೆ ಮುಕ್ಕುಂದಿ ಮಮತಾ, ಮುರಾರಿ ಲಕ್ಷ್ಮೀ, ಹೊಸಳ್ಳಿ ಶ್ರೀದೇವಿ, ಪ್ರಮುಖರಾದ ನರಸಪ್ಪ, ಹಬೀಬ್ ರೆಹಮಾನ್, ವೈ.ಅಬ್ದುಲ್ ಮುನಾಫ್, ಸೈಯದ್ ಉಸ್ಮಾನ, ಕೆ.ಮನೋಹರ, ಬಿ.ಷಣ್ಮುಖಪ್ಪ, ಡಾ.ಎ.ಸಿ.ದಾನಪ್ಪ, ಕೆ.ಷಣ್ಮುಖ, ಎಚ್.ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net