

ಸಿರಿಗೇರಿ: ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡುತ್ತಾರೆಯೋ ಅವರೇ ಶ್ರೇಷ್ಠರು ಎಂದು ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದಲಿ ಅನ್ನಪೂರ್ಣ ಕ್ರಿಯೇಷನ್ಸ್ ಸಂಚಾಲಕ ಸಿರಿಗೇರಿ ಯರಿಸ್ವಾಮಿ ನಿರ್ಮಾಣದ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಸಾಕ್ಷ್ಯ ಚಿತ್ರದ ಸಿಡಿ ಬಿಡುಗಡೆ ಮಾಡಿ ಭಾನುವಾರ ಮಾತನಾಡಿದರು.
ಕೇಂದ್ರ ಮಂತ್ರಿಯಾದ ಮೇಲೆ ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿ 15 ರಾಜ್ಯಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅರಿತಿದ್ದೇನೆ.
ಸಿದ್ಧಗಂಗಾ ಶ್ರೀಗಳು ನನ್ನ ಜೀವನದಲ್ಲಿ ಬದಲಾವಣೆ ತಂದಿದ್ದಾರೆ. ನಮ್ಮವರೇ ನಮಗೆ ಮುಳ್ಳು, ರಾಜಕೀಯ ಎಂಬುದು ಮುಳ್ಳಿನ ಹಾಸಿಗೆಯಾಗಿದ್ದು, ಎಲ್ಲರಿಗೂ ಅನ್ವಯಿಸುವುದಿಲ್ಲ. ನನಗೆ ಬೇಜಾರಾದಗ ಸಿದ್ಧಗಂಗಾ ಶ್ರೀಗಳ ಸನ್ನಿಧಿಯಲ್ಲಿರುತ್ತೇನೆ. ಒಳ್ಳೆಯವರಿಗೆ ಯಾವಾಗಲೂ ಒಳ್ಳೆಯದಾಗುತ್ತದೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಸೂಯೆ ಪಡುವವರು, ಚಾಡಿ ಹೇಳುವವರ ಬಗ್ಗೆ ತಲೆಕೆಡಸಿಕೊಳ್ಳದೇ ನಿರಂತರ ಕಾಯಕದಲ್ಲಿರುತ್ತೇನೆ ಎಂದರು.