

ತುರುವೇಕೆರೆ : ಹೋರಾಟದ ಮೂಲಕ ರಾಜಕೀಯಕ್ಕೆ ಬಂದ ದೇವೇಗೌಡನನ್ನು ರಾಜಕೀಯವಾಗಿ ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಜೀವ ಇರುವರೆಗೂ ರಾಜ್ಯ ಸುತ್ತಿ ಪಕ್ಷ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್‌ನಲ್ಲಿ ಸೋಮವಾರ ತಾಲೂಕು ಜೆಡಿಎಸ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ತುಮಕೂರಿಗೆ ಕರೆತಂದು ಚಕ್ರವ್ಯೂಹ ರಚಿಸಿ ಸೋಲಿಸಿದರು ಎಂದರು.
ಸೋಲಿನ ಪ್ರತಿಕಾರವಾಗಿ ನಾನು ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ದೇವೇಗೌಡರು ಜಿಲ್ಲೆಯ ಜವಾಬ್ದಾರಿ ತೆಗೆದುಕೊಂಡಿದ್ದು ಜಿಲ್ಲೆಯ 9 ತಾಲೂಕಿನಲ್ಲಿ ಪ್ರಚಾರ ಮಾಡಿದ್ದೇನೆ. ಈ ಚುನಾವಣೆಯಲ್ಲಿ ನಿಮ್ಮ ಶಕ್ತಿ ತೋರಿಸಬೇಕಿದೆ. ನಿಮ್ಮಲ್ಲಿ ಕೈಮುಗಿದು ಕೇಳುತ್ತೇನೆ ಎಂದು ಮನವಿ ಮಾಡಿದರು.
ಅಹಿಂದ ಮೀಸಲಾತಿ ನೀಡಿದ್ದು ಅಹಿಂದ ನಾಯಕರಲ್ಲ: ಅಹಿಂದ ಹಾಗೂ ಹಿಂದುಳಿದ ವರ್ಗದವರು ಇಂದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ಅಧಿಕಾರ ಅನುಭವಿಸಲು ಕಾರಣ ನಾನು ಮಾಡಿದ ಮೀಸಲಾತಿಯಿಂದ ಎಂಬುದನ್ನು ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಮುಖಂಡರು ಮರೆಯಬಾರದು ಎಂದು ಕಾಂಗ್ರೆಸ್ ಮುಖಂಡರಿಗೆ ದೇವೇಗೌಡ ಟಾಂಗ್ ನೀಡಿದರು.
ಅಭ್ಯರ್ಥಿ ಅನಿಲ್ ಕುಮಾರ್, ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲೂಕು ಅಧ್ಯಕ್ಷ ಸ್ವಾಮಿ, ಮುಖಂಡರಾದ ಪಿ.ಎಚ್.ಧನಪಾಲ್, ದೊಡ್ಡಘಟ್ಟಾ ಚಂದ್ರೇಶ್, ಬೆಳ್ಳಿಲೋಕೇಶ್, ಬೇಬಿತ್ಯಾಗರಾಜು, ಲೀಲಾವತಿ ಗಿಡ್ಡಯ್ಯ, ಚಂದ್ರೇಗೌಡ, ರಮೇಶ್, ಎ.ಬಿ.ಜಗದೀಶ್, ನಂಜೇಗೌಡ, ಜಪ್ರುಲ್ಲಾಖಾನ್, ಯೋಗಾನಂದ್ ಇದ್ದರು.
ರಾಜಣ್ಣನಿಗೆ ರಾಜಕೀಯ ಪುನರ್ ಜನ್ಮ ನೀಡಿದ್ದು ನಾನೇ : 2006ರಲ್ಲಿ ಕೆ.ಎನ್.ರಾಜಣ್ಣನಿಗೆ ರಾಜಕೀಯ ಪುನರ್ ಜನ್ಮ ನೀಡಿದ್ದು ಈ ದೇವೇಗೌಡರೇ ಎಂಬುದನ್ನು ಮರೆಯಬಾರದು. ಕೇವಲ 800 ಮತಗಳಿಂದ ಗೆದ್ದಿದ್ದರು ಅಷ್ಟೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ನಾವೇ ಎಂಬ ಹೇಳಿಕೆ ನೀಡುತ್ತಿರುವ ರಾಜಣ್ಣ ಅವರ ಮಗನಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದು ದೇವೇಗೌಡ ಕರೆಕೊಟ್ಟರು.
ಅತಿ ಹೆಚ್ಚು ಲೀಡ್ ತಂದು ಕೊಡುವ ಕ್ಷೇತ್ರ ತುರುವೇಕೆರೆ ಎಂಬ ಮಾತು ಇದೆ. ಅದನ್ನು ಈ ಬಾರಿಯೂ ನಿರೂಪಿಸಬೇಕಿದೆ. ಕಳೆದ ಬಾರಿಯ ಲೋಕಸಬಾ ಚುನಾವಣೆಯಲ್ಲಿ ದೇವೇಗೌಡರ ಸೋಲು ನಮ್ಮ ದೇಶ, ರಾಜ್ಯಕ್ಕೆ ಕಪ್ಪು ಚುಕ್ಕೆ. ಅದನ್ನು ಅಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಗೌರಿಶಂಕರ್ ಶಾಸಕ ಕಾಂಗ್ರೆಸ್ ಅಭ್ಯರ್ಥಿ ತಾನು ಹಿಂದುಳಿದ ವರ್ಗದವರು ಎಂದು ಹೇಳಿಕೊಂಡು ಎಸ್‌ಸಿ, ಎಸ್‌ಟಿ ಸಮುದಾಯದ ಬಳಿ ಮತಯಾಚಿಸುತ್ತಿದ್ದಾರೆ. ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದಾಗ ಜೀರೋ ಟ್ರಾಫಿಕ್ ಮಿನಿಸ್ಟರ್ ಎಂದು ಜರಿಯುತ್ತಿದ್ದಾಗ ನಿಮಗೆ ಗೊತ್ತಾಗಲಿಲ್ಲವೇ? ಎಂ.ಟಿ.ಕೃಷ್ಣಪ್ಪ ಮಾಜಿ ಶಾಸಕ