

ಮೈಸೂರು: ರಾಜಕಾರಣಿಗಳ ಮಕ್ಕಳಿಗೆ ಸ್ಥಾನಮಾನ ಕಲ್ಪಿಸಿಕೊಡುವ ಸಲುವಾಗಿ ಕಂಡವರ ಮಕ್ಕಳನ್ನು ಹಾಳು ಮಾಡುವ ಮನಸ್ಥಿತಿ ಹೋಗಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ಕಿಡಿಕಾರಿದರು.
ನಗರದ ಕಾಸ್ಮೋಪಾಲಿಟನ್ ಕ್ಲಬ್‌ನಲ್ಲಿ ಗುರುವಾರ ಆಯೋಜಿಸಿದ್ದ ಭಗವತಿ ಚಿಟ್ಸ್ ಸಂಸ್ಥೆಯ ಮೈಸೂರು ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು
ಪ್ರತಿಯೊಬ್ಬ ರಾಜಕಾರಣಿ ತಮ್ಮ ಮಕ್ಕಳನ್ನು ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ ಮಾಡಲು ಹಾತೊರೆಯುತ್ತಾರೆ. ಅದಕ್ಕಾಗಿ ಕಂಡವರ ಮಕ್ಕಳನ್ನು ರಾಜಕೀಯವಾಗಿ ಬಲಿ ಕೊಡುತ್ತಾರೆ. ಇದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದೆ. ಇದು ಹೋಗಬೇಕು.
ರಾಜ್ಯದಲ್ಲಿ ಕಂಡವರ ಮಕ್ಕಳಿಗೆ ರಾಜಕೀಯ ಸ್ಥಾನಮಾನ ಕೊಟ್ಟ ಏಕೈಕ ವ್ಯಕ್ತಿ ಡಿ.ದೇವರಾಜ ಅರಸು ಮಾತ್ರ. ಬೇರೆಯವರು ಆ ಕೆಲಸ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಬಳಿಕ ನಾನು ಯಾವ ಕಾರ್ಯಕ್ರಮಗಳಿಗೂ ಹೋಗುತ್ತಿಲ್ಲ. ರಾಜಕೀಯದಿಂದ ವಿರಾಮ ತೆಗೆದುಕೊಂಡಿರುವೆ ಎಂದರು.