ಸಂಘದಲ್ಲಿ ರಾಜಕಾರಣಿಗಳು ಪ್ರವೇಶಿಸದಿರಲಿ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜಕಾರಣಿಗಳು ನುಸುಳಲು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಸಾಹಿತಿ ಡಾ. ಡಿ.ಎಂ.ಹಿರೇಮಠ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಸಾಹಿತ್ಯ, ಸಂಗೀತ, ಸಂಸ್ಕೃತಿ, ಕಲೆ ಆರಾಧಿಸುವ ಸ್ಥಳ. ಕರ್ನಾಟಕದ ಆಗು ಹೋಗುಗಳನ್ನು ನೋಡಿಕೊಂಡು ಅದಕ್ಕೆ ಸ್ಪಂದಿಸುವ ಸ್ಥಳವಾಗಿದೆ. ಶತಮಾನದಿಂದ ಈ ಸಂಘಟನೆಯನ್ನು ಕನ್ನಡದ ಹಿರಿಯರು ನಡೆಸಿಕೊಂಡು ಬಂದಿದ್ದು, ಇದೀಗ ಇಲ್ಲಿ ರಾಜಕಾರಣ ನುಸುಳುತ್ತಿರುವುದು ಖೇದಕರ ಸಂಗತಿ ಎಂದರು.

ಡಾ. ಹನುಮಾಕ್ಷಿ ಗೋಗಿ ಮಾತನಾಡಿ, ಹಲವು ವರ್ಷಗಳಿಂದ ಸಂಘದಲ್ಲಿ ವಿಭಿನ್ನ ರಾಜಕಾರಣ ನಡೆದಿದೆ. ನಾನು ಅನೇಕ ಬಾರಿ ಇದಕ್ಕೆ ಬಲಿಪಶುವಾಗಿದ್ದೇನೆ. ಸಾಹಿತ್ಯ, ಸಂಶೋಧನೆಯಲ್ಲಿ ತೊಡಗಿರುವ ನನಗೆ ಈ ಬಾರಿಯಾದರೂ ಮತದಾರರು ಅವಕಾಶ ಮಾಡಿಕೊಡುವ ಭರವಸೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net