

ಎ.ಅಪ್ಪಾಜಿಗೌಡ ಮುಳಬಾಗಿಲು
ಒಂದು ಕಾಲಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಸಂಪದ್ಭರಿತವಾಗಿದ್ದ ಕೋಲಾರ ಜಿಲ್ಲೆಯು ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಬಡವದಾಂತಾಗಿದೆ. ಹೀಗಾಗಿ ಆಮದು ನಾಯಕರ ಅವಲಂಬನೆಗೆ ಒಳಗಾಗಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇದರ ಮುಂದುವರಿದ ಭಾಗವೇ ವಾಜಿ ಸಿ.ಎಂ.ಸಿದ್ದರಾಮಯ್ಯ ಆಗಮನಕ್ಕೆ ರತ್ನಗಂಬಳಿ ಹಾಸಿರುವುದು ಎಂಬ ಮಾತುಗಳು ಕ್ಷೇತ್ರದ ರಾಜಕೀಯವನ್ನು ನೋಡುತ್ತ ಬಂದ ಹಿರಿಯರ ನಡುವೆ ಕೇಳಿಬರುತ್ತಿದೆ. ಕೋಲಾರ ಎಂದರೆ ಚಿನ್ನದ ಗಣಿ, ಹಣ್ಣು ತರಕಾರಿ, ದವಸ ಧಾನ್ಯ ಬೆಳೆಯುವ ಪ್ರದೇಶ. ಚಿನ್ನ ಖಾಲಿಯಾದಂತೆ ಅಂತರ್ಜಲವೂ ಖಾಲಿಯಾಗಿ ನದಿ, ನಾಲೆಗಳು, ಕೆರೆ-ಕುಂಟೆಗಳು ಮುಚ್ಚಿಹೋಗುತ್ತಿದ್ದಂತೆ ಜಿಲ್ಲೆಯ ರಾಜಕೀಯ ನಾಯಕತ್ವವೂ ಬರಡಾಗಿ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದೆ. ಇತ್ತೀಚೆಗೆ ಬೆಂಗಳೂರಿನ ಕೊಳಚೆ ಮತ್ತು ರಾಸಾಯನಿಕಯುಕ್ತ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಭಗೀರಥ ಪ್ರಯತ್ನದಂತೆ ರಾಜಕೀಯ ನಾಯಕತ್ವ ತುಂಬುವ ಕಾಯಕವನ್ನು ಜಿಲ್ಲೆಯ ಜನಪ್ರತಿನಿಧಿಗಳು ವಾಡಿದಂತೆ ಸಾಧನೆ ಮೆರೆಯುತ್ತಿದ್ದಾರೆ.
ಪದಕಾಷ್ಠಿ ವಿ.ವೆಂಕಟಮುನಿ, ಹಿರಿಯ ಕಾಂಗ್ರೆಸ್ ಮುಖಂಡ, ಮುಳಬಾಗಿಲು.ಜನಪ್ರತಿನಿಧಿಗಳಾದವರು ಉತ್ತಮ ಯುವ ರಾಜಕಾರಣಿಗಳನ್ನು ಬೆಳೆಸಿದ್ದರೆ, ಗಟ್ಟಿ ನಾಯಕತ್ವ ಸಿಕ್ಕಿ ಜಿಲ್ಲೆ ರಾಜ್ಯವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿತ್ತು. ಹಿಂದೆ ಅಖಂಡ ಕೋಲಾರ (ಕೋಲಾರ-ಚಿಕ್ಕಬಳ್ಳಾಪುರ) ಜಿಲ್ಲೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ರಾಜಕಾರಣಿಗಳು ಆಡಳಿತ ನಡೆಸಿದ್ದರು. ಆದರೆ, ಇಂದು ಜಿಲ್ಲೆ ಅನಾಥವಾಗಿದೆ.