ಮಂಡ್ಯದಂತೆ ಮೇಲುಕೋಟೆ ಕ್ಷೇತ್ರದಲ್ಲಿಯೂ ಗೊಂದಲವಿದೆ. ಪ್ರತಿ ಬಾರಿಯಂತೆ ಈ ಸಲವೂ ರೈತ ಸಂಘಕ್ಕೆ ಬೆಂಬಲ ಕೊಡುವ ಬಗ್ಗೆ ಆಕ್ಷೇಪವಿದೆ. ಆದರೂ ಅವಕಾಶ ಕೋರಿ ಆರು ಜನರು ಅರ್ಜಿ ಸಲ್ಲಿಸಿದ್ದರೂ, ಡಾ.ಎಚ್.ಎನ್.ರವೀಂದ್ರ ರೇಸ್‌ನಿಂದ ಹಿಂದೆ ಸರಿದಿದ್ದಾರೆ. ಉಳಿದಂತೆ ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮಿಗಾ, ಜಿಪಂ ಮಾಜಿ ಸದಸ್ಯ ಎಚ್.ತ್ಯಾಗರಾಜ್, ನಿವೃತ್ತ ನ್ಯಾಯಾಧೀಶ ಶಿವಪ್ಪ ಅವರ ಸಹೋದರ ನಾಗಭೂಷಣ್, ಉದ್ಯಮಿ ಕಾಗೇಪುರ ಆನಂದಕುಮಾರ್, ಕೆಪಿಸಿಸಿ ಮಾಜಿ ಸದಸ್ಯ ಎಲ್.ಡಿ.ರವಿ ಹೆಸರಿದ್ದರೂ ಕ್ಷೇತ್ರದಲ್ಲಿ ಪಕ್ಷ ಸಧೃಡವಾಗಿಲ್ಲ ಎನ್ನುವುದು ನಾಯಕರಿಗೂ ಗೊತ್ತಿದೆ.