ರಾಜಕೀಯ ನಾಯಕರಿಗೆ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

MAHEMNDR KUMAR
MAHEMNDR KUMAR
Published on

ರಾಯಚೂರು ಡಾ.ಬಿ.ಆರ್.ಅಂಬೇಡ್ಕರ್ ಸಿದ್ದಾಂತ, ಆಶಯಗಳನ್ನು ಗಾಳಿಗೆ ತೂರಿರುವ ಕಾಂಗ್ರೆಸ್, ಬಿಜೆಪಿ,ಜೆಡಿಎಸ್ ಪಕ್ಷಗಳ ಮುಖಂಡರಿಗೆ ಬಾಬಾಸಾಹೇಬರ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲವೆಂದು ಡಾ.ಅಂಬೇಡ್ಕರ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರು ವಿಜಯನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಲಿಂಗಾಯತ ಬೇಡ ಜಂಗಮರನ್ನು ಎಸ್ಸಿ ಪಟ್ಟಿಗೆ ಸೇರಿಸಬಾರದು ಎಂದು ಹೇಳುತ್ತಾರೆ. ಆದರೆ 2002 ಮತ್ತು 2020 ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಭೋವಿ(ವಡ್ಡರ), ಕೊರಚ, ಕೊರಮ ಸಮಾಜಗಳನ್ನು ತೆಗೆಯುವಂತೆ ಆದೇಶಿಸಿದ್ದರೂ ಏಕೆ ಪ್ರಶ್ನಿಸುತ್ತಿಲ್ಲ. ಕಾಂಗ್ರೆಸ್ ಪರಿಶಿಷ್ಟ ಓಟ ಪಡೆಯಲು ಹುನ್ನಾರ ನಡೆಸಿದೆ ಎಂದರು.

ಮಹೇಂದ್ರ ಕುಮಾರ ಮಿತ್ರ ಮತ್ತು ಇತರರು ಪ್ರಕರಣದಲ್ಲಿ ಸುಪ್ರಿಂಕೋರ್ಟ್ (ರಿಟ್ ಅರ್ಜಿ ನಂ.1381/2009) 2020ರ ಫೆಬ್ರುವರಿ 14 ರಂದು ಅಸ್ಪಶ್ಯ ಪಟ್ಟಿಯಲ್ಲಿ ಇರದೇ ತೆಗೆಯಲು ಆದೇಶಿಸಿದೆ. ಆದರೆ ಕಾಂಗ್ರೆಸ್ ನಾಯಕರು ಸುಪ್ರಿಂಕೋರ್ಟ್, ಹೈಕೋರ್ಟ್ ಆದೇಶ ಜಾರಿ ಮಾಡಲು ಮುಂದಾಗುತಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ವಿರೋಧಿಸಿದ್ದ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಮೀಸಲು ಮಾತ್ರ ಬೇಕು. ಅಸ್ಪಶ್ಯತೆ ಮಾತ್ರ ನಿವಾರಣೆ ಕುರಿತು ಮಾತನಾಡುತ್ತಿಲ್ಲ.

1956ರಲ್ಲಿ ಡಾ.ಬಿ.ಆರ್.ಅಂಬೇಡ್ಕರ ಮಾರ್ಚ 18 ರಂದು ಆಗ್ರಾ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮೀಸಲಾತಿ ಸೌಲಭ್ಯ ಪಡೆದ ಅಸ್ಪಶ್ಯರು ನಂಬಿಕೆ ದ್ರೋಹಿಗಳಾಗಿದ್ದಾರೆ. ಅವರು ಸಿದ್ದಾಂತ ಜಾರಿ ಮಾಡದೇ ಕುಟುಂಬಗಳಿಗೆ ಮೀಸಲು ಪಡೆಯುತ್ತಿದ್ದಾರೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮೋಸ ಮಾಡಿದವರಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಚ್.ಆಂಜಿನೇಯ ಸೇರಿದಂತೆ ಮೀಸಲು ಕ್ಷೇತ್ರದಿಂದ ಅಧಿಕಾರ ಹಿಡಿದಿರುವ ಶಾಸಕರು, ಸಚಿವರುಗಳಾಗಿದ್ದಾರೆ ಎಂದರು.ನೈತಿಕತೆಯಿದ್ದರಾ ರಾಜಕೀಯ ಪಕ್ಷ ಬಿಟ್ಟು ಅಸ್ಪಶ್ಯತೆ ನಿವಾರಣೆಗೆ ಧ್ವನಿಯೆತ್ತಲಿ ಎಂದರು.

ಈ ಸಂದರ್ಭದಲ್ಲಿ ಡಾ.ಅಂಬೇಡ್ಕರ ಪಿಪುಲ್ಸ್ ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ದೇವಮಿತ್ರ,ಪಾರ್ಟಿ ಅಧ್ಯಕ್ಷ ಮಾರುತಿರಾವ್ ಜಂಬಗಾ, ಮಹಾಂತೇಶ ಕುಮಾರ ಮಿತ್ರ, ಮದನಕುಮಾರ ಮಿತ್ರ, ಸ್ವಾಮಿದಾಸ ಕುರ್ಡಿ, ಶೇಖರಪ್ಪ, ನರಸಿಂಹಲು ಪೋತಗಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net