

ಮಂಗಳೂರು: ಪಂಚರಾಜ್ಯ ಚುನಾವಣೆ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳು ಗೋಚರಿಸಲಿವೆ ಎಂದು ಮಾಜಿ ಪ್ರಧಾನಿ. ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು 120-150 ಸ್ಥಾನ ಬರುತ್ತದೆ ಎಂದು ಹೇಳುತ್ತಿವೆ. ಆದರೆ 2023ರ ಚುನಾವಣೆಯಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರವೇ ಬರಲಿದೆ.
ಜಾತ್ಯತೀತ ಪಕ್ಷಕ್ಕೇ ನಮ್ಮ ನೆರವು ಎಂದರು. ದಕ್ಷಿಣ ಕನ್ನಡ, ಉಡುಪಿಯಿಂದ ಉತ್ತರ ಕನ್ನಡ ತನಕವೂ ಸಮಸ್ಯೆಗಳನ್ನು ಸೃಷ್ಟಿಸಿ ಅವುಗಳನ್ನು ಪೋಷಿಸಿಕೊಂಡು ಬರುತ್ತಿರುವ ಶಕ್ತಿಗಳಿವೆ ಎನ್ನುವುದನ್ನು ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಗಮನಿಸಿದ್ದೇನೆ. ಎರಡು ರಾಷ್ಟ್ರೀಯ ಪಕ್ಷಗಳಿಗೂ ಸಮಸ್ಯೆಗಳನ್ನು ಬಗೆಹರಿಸುವ ಆಸಕ್ತಿ ಇಲ್ಲ. ಈ ರಾಜಕೀಯ ಪಕ್ಷಗಳು ಹಿಂದು ಮತ್ತು ಮುಸ್ಲಿಮರ ನಡಿವೆ ವೈಷಮ್ಯ ಸೃಷ್ಟಿಸಿ, ರಾಜಕೀಯ ಲಾಭ ಪಡೆಯುವ ಪ್ರಯತ್ನ ನಿರಂತರ ನಡೆಸುತ್ತಿರುವುದು ದುರಂತ ಎಂದು ಹೇಳಿದರು.