

ಹೊಳೆಹೊನ್ನೂರು: ಸಂಘದಲ್ಲಿ ನಡೆಯುವ ಸಭೆಗಳಿಗೆ ಷೇರುದಾರರು ನಿಯಮಿತವಾಗಿ ಹಾಜರಾಗಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ಸೋಮವಾರ ಹನುಮಂತಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿದ ಅವರು, ಸಂಘದಲ್ಲಿ ರಾಜಕೀಯ ಸುಳಿಯದಂತೆ ನೋಡಿಕೊಳ್ಳಬೇಕು. ಸದಸ್ಯರು ಸಾಲಗಳನ್ನು ಸುಸ್ತಿ ಆಗದಂತೆ ನಿಗದಿತ ಸಮಯದಲ್ಲಿ ಪಾವತಿಸಬೇಕು ಎಂದರು.
ಸಂಘಟನೆಗಳು ಸಮಾಜದಲ್ಲಿ ಪರಿವರ್ತನೆ ಸಾಧಿಸಿ ಸಬಲೀಕರಣಕ್ಕೆ ಸಹಕಾರ ನೀಡುತ್ತವೆ. ರೈತರು ವೆಚ್ಚಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ಮಾರುಕಟ್ಟೆ ವ್ಯಾಪಾರ ಮೇಲೆ ಗಮನ ನೀಡಬೇಕು. ಇಂದಿನ ಸಣ್ಣ ಉಳಿತಾಯವೇ ಮುಂದಿನ ಬದುಕಿಗೆ ಆಧಾರವಾಗುತ್ತವೆ ಎಂದರು.
ಸಂಘದ ಅಧ್ಯಕ್ಷ ಭಾಸ್ಕರ್ ರೆಡ್ಡಿ, ಉಪಾಧ್ಯಕ್ಷ ಮಂಜುನಾಥ್, ಜಿ.ಎಸ್.ಮಾವುರಪ್ಪ, ಚಂದ್ರಯ್ಯ, ಎಚ್.ಎನ್.ನಾಗರಾಜ್, ಹಾಲೇಶಪ್ಪ, ಬಸವರಾಜ್, ಹನುಮಂತಪ್ಪ, ರುದ್ರೇಶ್, ನಾಗರಾಜ್, ಜಯಮ್ಮ, ಚಂದ್ರಮ್ಮ, ಟಿ.ಎಸ್.ಗಿರೀಶ್ ಇತರರಿದ್ದರು.