ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ

25MUDALGI1
Published on

ಮೂಡಲಗಿ: ಚುನಾವಣೆ ಸಂದರ್ಭಗಳಲ್ಲಿ ಮಾತ್ರ ರಾಜಕೀಯ ಮಾಡಬೇಕು. ಅಭಿವೃದ್ಧಿ ವಿಷಯಗಳಲ್ಲಿ ರಾಜಕೀಯ ಬೆರೆಸಿದರೆ ಪ್ರಜಾಪ್ರಭುತ್ವ ವ್ಯವಸ್ಥಗೆ ಧಕ್ಕೆಯಾಗುತ್ತದೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ಹಳ್ಳೂರ ಮತ್ತು ದಂಡಾಪುರ ಗ್ರಾಮಗಳಲ್ಲಿ ರಾಜ್ಯಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ ತಂಗುದಾಣ ಶನಿವಾರ ಉದ್ಘಾಟಿಸಿ ಮಾತನಾಡಿದರು. ಹಳ್ಳೂರ ಗ್ರಾಮದಲ್ಲಿ ಈಗಾಗಲೇ ಹಳ್ಳದರಂಗ ಸಮುದಾಯ ಭವನ ನಿರ್ಮಾಣಕ್ಕೆ ೫೦ ಲಕ್ಷ ರೂ. ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿದೆ. ಇದೀಗ ೫ ಲಕ್ಷ ರೂ. ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಬಳಿಕ ಹಳ್ಳದರಂಗ ದೇವಸ್ಥಾನ ಬಳಿ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನ ಕಾಮಗಾರಿ ವೀಕ್ಷಿಸಿದರು.

ಶಿವಪ್ಪ ಕೌಜಲಗಿ, ಶ್ರೀಕಾಂತ ಕೌಜಲಗಿ, ಸದಾಶಿವ ಮಾವರಕರ, ಸುರೇಶ ಮಗದುಮ್ಮ, ಗೂಳಪ್ಪ ನೇಸೂರ, ಅಶೋಕ ತೇರದಾಳ, ಆನಂದ ಸಂತಿ, ಬಸಪ್ಪ ಅರಳಿಮಟ್ಟಿ, ಅಂದಾನಿ ಅನಂತಪುರ, ಲಕ್ಷ್ಮಣ ಸಪ್ತಸಾಗರ, ಶ್ರೀಶೈಲ ಹಿರೇಮಠ, ಹನುಮಂತ ಅಟಮಟ್ಟಿ, ಬಸವರಾಜ ಗಾಡವಿ, ಈರಪ್ಪ ಢವಳೇಶ್ವರ, ಹನುಮಂತ ಗೋಡಿಗೌಡರ, ಮಲಕಾರಿ ಪೋಲಿಸಗೋಳ, ಸಿದ್ದಪ್ಪ ಹೊರಟ್ಟಿ, ರಾಮಪ್ಪ ವಡೇರ, ಯಲ್ಲಪ್ಪ ಹೊಸೂರ, ಗೋಪಾಲ ಹೊರಟ್ಟಿ, ರಮೇಶ ಹೊರಟ್ಟಿ, ಹಾಲಪ್ಪ ಹೊಸುರ, ಮಾರುತಿ ಹರಿಜನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net