ಜು.18ರ ನಂತರ ರಾಜಕೀಯ ಬದಲಾವಣೆ: ಆಯನೂರು ಮಂಜುನಾಥ

ex mlc ayanur manjunath
ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ
Published on

ಶಿವಮೊಗ್ಗ: ಜುಲೈ 18ರ ನಂತರ ರಾಜಕೀಯ ಬದಲಾವಣೆ ಆಗಬಹುದು. ಎಚ್.ಡಿ.ಕುಮಾರಸ್ವಾಮಿ ಅವರೇ ಪ್ರತಿಪಕ್ಷದ ನಾಯಕರಾದರೂ ಅಚ್ಚರಿ ಇಲ್ಲ ಎಂದು ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ ಭವಿಷ್ಯ ನುಡಿದರು.

ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾನಾಯ್ಕ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಬರಲಿದ್ದು ಕುಮಾರಸ್ವಾಮಿ ಸಿಎಂ ಆಗುತ್ತಾರೆಂಬ ನಿರೀಕ್ಷೆ ಇತ್ತು. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿದವು. ಕಾಂಗ್ರೆಸ್ ಸಹ ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ ಎಂದರು.
ಆದರೆ 18ರ ನಂತರ ಕುಮಾರಸ್ವಾಮಿ ಅವರು ಬಹುಶಃ ಅಧಿಕೃತವಾಗಿ ಪ್ರತಿಪಕ್ಷದ ನಾಯಕನಾಗಿ ಆಯ್ಕೆ ಆಗುವ ಎಲ್ಲ ಸಾಧ್ಯತೆಗಳಿದ್ದು ಇಡೀ ರಾಜ್ಯದ ರಾಜಕೀಯ ವಾತಾವರಣ ಬದಲಾಗಲಿದೆ. ಯಾರನ್ನು ಬಿಟ್ಟು ಬಂದೆವೋ ಅವರನ್ನು ಅಪ್ಪುಕೊಳ್ಳುವ ಸಂದರ್ಭ ಬರಲಿದೆ. ಮುಂದೆ ನಾನು ವಿಧಾನ ಪರಿಷತ್‌ಗೆ ಹೋಗಲು ಸಿದ್ಧವಾಗಿದ್ದು ಪ್ರಸನ್ನಕುಮಾರ್ ಅವರನ್ನು ವಿಧಾನಸಭೆಗೆ ಕಳುಹಿಸುವ ಕೆಲಸ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net