ಚಿಕ್ಕಬಳ್ಳಾಪುರ: ಜಿಲ್ಲಾ ಬಿಜೆಪಿ ಅಧ್ಯಕ್ಷ ನೇಮಕದಲ್ಲಿ ಗೊಂದಲ, ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಲು ನಾಯಕರ ಭವಿಷ್ಯದ ರಾಜಕೀಯ ಲೆಕ್ಕಾಚಾರಗಳೇ ಪ್ರಮುಖ ಕಾರಣ.
ಶತಾಯ ಗತಾಯ ಬಿ.ಸಂದೀಪ್ ರೆಡ್ಡಿಗೆ ಗಾದಿ ಸಿಗಬಾರದು ಎನ್ನುವುದು ಸಂಸದ ಡಾ ಕೆ.ಸುಧಾಕರ್ ವಾದವಾಗಿತ್ತು. ಇದಕ್ಕೆ ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶಿಡ್ಲಟ್ಟದ ಬಿಜೆಪಿ ಅಭ್ಯರ್ಥಿಯಾಗಿದ್ದ ಸೀಕಲ್ ರಾಮಚಂದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದರು. ಹೀಗೆ ಬೆಂಬಲಿಗರಿಗೆ ಹೊಣೆ ವಹಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷದ ಸಂಟನೆಯ ಹಿಡಿತವನ್ನು ಉಳಿಸಿಕೊಳ್ಳಲು ಬಯಸಿದ್ದರು. ಮತ್ತೊಂದೆಡೆ ಹಿಂದಿನ ಲೋಕಾಸಭಾ ಚುನಾವಣೆಯಲ್ಲಿ ಟಿಕೆಟ್ ವಿಚಾರವಾಗಿ ಸ್ವಪಯ ಪಾಳಯದಲ್ಲಿ ಒಂದು ಬಣವಾಗಿ ಗುರುತಿಸಿಕೊಂಡಿದ್ದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಮುನಿರಾಜು, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತ್ರ ವಲಸಿಗರ ವಿರುದ್ಧ ಮೂಲ ಬಿಜೆಪಿಗರು ಮೇಲುಗೈ ಸಾಧಿಸುವಂತಾಗಲು, ಅದರಲ್ಲೂ ಸುಧಾಕರ್ ಆಟವನ್ನು ಬಗ್ಗು ಬಡಿಯಲು ಸಂದೀಪ್ ರೆಡ್ಡಿಗೆ ನಾಯಕತ್ವ ಕೊಡಿಸಲು ಕಸರತ್ತು ನಡೆಸಿದರು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲೆ ಒತ್ತಡ ಹೇರಿ, ಬೇಕಾದ ಚುನಾವಣಾ ಮಾರ್ಗದಲ್ಲಿ ಜಿಲ್ಲಾಧ್ಯಕ್ಷ ಹೆಸರನ್ನು ಘೋಷಿಸುವಲ್ಲಿ ಯಶಸ್ವಿಯಾದರು. ಇದರಿಂದ ಆಕ್ರೋಶಗೊಂಡ ಸಂಸದರು ರಾಷ್ಟ್ರೀಯ ನಾಯಕರ ಎದುರು ಪಟ್ಟು ಹಿಡಿದು ನೇಮಕಕ್ಕೆ ತಡೆ ಕೊಡಿಸುವ ಮೂಲಕ ಪ್ರಾಬಲ್ಯ ಮೆರೆದ ಸಂದೇಶ ಸಾರಿದ್ದಾರೆ.
*ರಾಜಕೀಯ ಲೆಕ್ಕಾಚಾರ
ಪ್ರಸ್ತುತ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಮೂಲ, ವಲಸಿಗರ ಅಸ್ತಿತ್ವದ ಪೈಪೋಟಿ ಇದೆ. ಅದರಲ್ಲೂ. ವಿಜಯೇಂದ್ರ ಬಣ, ಸಂಸದ ಸುಧಾಕರ್ ಬಣ ಎನ್ನುವ ಆಂತರಿಕ ಗದ್ದಲ ಸದ್ದು ಮಾಡುತ್ತಿದೆ. ಇದು ಕಳೆದ ಲೋಕಸಭಾ ಚುನಾವಣೆಯ ಬಳಿಕ ಜೋರಾಗಿದ್ದು ಈಗ ಹಿಡಿತವನ್ನು ಸಾಧಿಸಿ, ನಿರೀuಟಿಜeಜಿiಟಿeಜಯ ಮುಂಬರುವ ಜಿ.ಪಂ, ತಾ.ಪಂ, ವಿಧಾನಸಭಾ ಚುನಾವಣೆಗಳಲ್ಲಿ ಮೇಲುಗೈ ಸಾಧಿಸುವ ನಿಟ್ಟಿನಲ್ಲಿಯೇ ಪ್ರತ್ಯೇಕ ಮಾರ್ಗದಲ್ಲಿ ಸಾಗಲಾಗುತ್ತಿದೆ.
ಸಂಸದ ಡಾ ಕೆ.ಸುಧಾಕರ್ ಕಾಂಗ್ರೆಸ್ನಿAದ ಬಿಜೆಪಿಗೆ ಬಂದಿದ್ದರೆ, ಭವಿಷ್ಯದಲ್ಲಿ ಬೇರೆ ಪಕ್ಷಕ್ಕೆ ಸೇರಬಹುದು. ಆಗ ಅವರ ನಿಷ್ಠಾವಂತ ಬೆಂಬಲಿಗರು ಹಿಂಬಾಲಿಸಿಕೊAಡು ಹೋಗುತ್ತಾರೆ. ಇದಕ್ಕೆ ಪಕ್ಷ ಸಂಟನೆಗಿAತಲೂ ವೈಯಕ್ತಿಕ ವರ್ಚಸ್ಸಿನ ವೃದ್ಧಿ, ಹಿಂಬಾಲಕರ ಪಡೆ ಸೃಷ್ಟಿ, ಹೊಂದಾಣಿಕೆ ರಾಜಕಾರಣ, ನಿಷ್ಠಾವಂತರನ್ನು ಹೊರತುಪಡಿಸಿ ಇತರರ ಕಡೆಗಣನೆ ಹೆಚ್ಚಳ ಧೋರಣೆಯನ್ನು ಪ್ರದರ್ಶಿಸಲಾಗುತ್ತಿದೆ ಎಂದು ಮೂಲ ಬಿಜೆಪಿಗರು ಆರೋಪಿಸುತ್ತಾರೆ. ಇದಕ್ಕೆ ಅನುಗುಣವಾಗಿ ಬಹುತೇಕ ವಲಸಿಗರು ಸುಧಾಕರ್ ಪರ ನಿಷ್ಠೆಯನ್ನು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ.