ಅಪರಿಚಿತರನ್ನು ನಯವಾಗಿ ದೂರವಿಡಿ

h18-kims
Published on

ಹುಬ್ಬಳ್ಳಿ: ಹು-ಧಾ ನಗರ ಪೊಲೀಸ್ ಕಮಿಷನರೇಟ್‌ನ ಹುಬ್ಬಳ್ಳಿ ಉತ್ತರ ವಿಭಾಗದ ವಿದ್ಯಾನಗರ ಪೊಲೀಸ್ ಠಾಣೆಯಿಂದ ಚನ್ನಮ್ಮ ಪಡೆ, ಸೈಬರ್ ಅಪರಾಧ ಹಾಗೂ ಡ್ರಗ್ಸ್ ಜಾಗೃತಿ ಕಾರ್ಯಕ್ರಮವನ್ನು ನಗರದ ಕಿಮ್ಸ್‌ನ ಗೋಲ್ಡನ್ ಜುಬ್ಲಿ ಹಾಲ್‌ನಲ್ಲಿ ಮಂಗಳವಾರ ಏರ್ಪಡಿಸಲಾಗಿತ್ತು.
ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ನಾಯ್ಕ ಮಾತನಾಡಿ, ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ನಂಬಿಸಿ ವಂಚಿಸುತ್ತಿದ್ದಾರೆ. ಹಣ ಕಳೆದುಕೊಳ್ಳುವುದಷ್ಟೇ ಅಲ್ಲ, ಬೆದರಿಕೆ ಹಾಕುವ ಕೃತ್ಯಗಳೂ ನಡೆಯುತ್ತಿವೆ. ಇದರಿಂದ ಜನರು ಎಚ್ಚೆತ್ತುಕೊಳ್ಳಬೇಕು. ಅಪರಿಚಿತರೊಂದಿಗೆ ಜಾಗೃತಿಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಅಲ್ಲದೇ ಮಹಿಳೆಯರಿಗೆ ತೊಂದರೆಯಾದಲ್ಲಿ 112 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದರು.
ಸಿಇಎನ್ ಕ್ರೈಂ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ಮಾತನಾಡಿ, ಮಾದಕ ವ್ಯಸನದಿಂದ ಯುವಕರು ದೂರ ಇರಬೇಕು. ಇದು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ. ನಿಮ್ಮ ಭವಿಷ್ಯ ಹಾಳು ಮಾಡುವುದಲ್ಲದೇ ತಂದೆ-ತಾಯಿ ಕನಸು ನುಚ್ಚು ನೂರು ಮಾಡಲಿದೆ ಎಂದರು.
ಸಿಇಎನ್ ಕ್ರೈಂ ಎಸಿಪಿ ಶಿವರಾಜ ಕಟಕಬಾವಿ, ವಿದ್ಯಾನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಯಂತ ಗೌಳಿ, ಕಿಮ್ಸ್ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ವಾರ್ಡನ್ ಡಾ.ಕೆ.ಎಫ್. ಕಮ್ಮಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net