

ಕಾಸರಗೋಡು: ಪೋಲಿಯೋ ಲಸಿಕೆ ವಿತರಣೆ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಪಳ್ಳಿಕೆರೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿದರು.
ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಕೀಯ ಕಚೇರಿ ಉಪ ಡಿಎಂಒ ಡಾ.ಸಂತೋಷ್ ಬಿ. ಮುಖ್ಯ ಭಾಷಣ ಮಾಡಿದರು. ಜಿಲ್ಲಾ ವೈದ್ಯಕೀಯ ಕಚೇರಿ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಆಶ್ರಯದಲ್ಲಿ ಐಎಂಎ, ಐಎಪಿ ಮತ್ತು ರೋಟರಿ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಳ್ಳಿಕೆರೆ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಮಣಿಕಂಠನ್, ವಾರ್ಡ್ ಸದಸ್ಯೆ ಕೆ.ಅನಿತಾ, ಎಡಿಎಚ್‌ಎಸ್ ಯುನಿಸೆಫ್ ಸಲಹೆಗಾರ್ತಿ ಡಾ.ಸೌಮ್ಯಾ, ರೋಟರಿ ಕ್ಲಬ್ ವಲಯ ಸಂಯೋಜಕ ಎಂಡಿ ರಾಜೇಶ್ ಕಾಮತ್, ಐಎಪಿ ಕಾರ್ಯದರ್ಶಿ ಡಾ.ವಾಹಿನ್ ಪಿ.ಅಬ್ದುಲ್ಲಾ, ಐಎಂಎ ಅಧ್ಯಕ್ಷ ಡಾ.ಹರಿ ಕಿರಣ್ ಬಂಗೇರ, ವೈದ್ಯರ ಸಂಘದ ಅಧ್ಯಕ್ಷ ಡಾ.ಸುಂದರ ಆನೆಮಜಲ್, ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ.ಡಿ.ಜಿ.ರಮೇಶ್ ಡಾ.ಬಾಸಿಲ್ ವರ್ಗೀಸ್, ವೈದ್ಯಕೀಯ ಅಧಿಕಾರಿ ಡಾ.ಸಿ.ವೇಣು, ಉಪ ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಪಿ.ಪಿ.ಹಸೀಬ್, ಐಸಿಡಿಎಸ್ ಮೇಲ್ವಿಚಾರಕ ಟಿ.ರಾಮ ಮೊದಲಾದವರಿದ್ದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಶಾಂತಿ ಕೆ.ಕೆ. ಸ್ವಾಗತಿಸಿದರು. ಆರೋಗ್ಯ ನಿರೀಕ್ಷಕ ಸಜೀವನ್ ಪಿ.ವಿ. ವಂದಿಸಿದರು.
ವಿವಿಧೆಡೆ ವಿತರಣೆಗೆ ವ್ಯವಸ್ಥೆ
ಜಿಲ್ಲೆಯ 1,08,217 ಮಕ್ಕಳಿಗೆ ಮತ್ತು 922 ಅತಿಥಿ ಕಾರ್ಮಿಕರ ಮಕ್ಕಳಿಗೆ ಪೋಲಿಯೋ ಹನಿ ಹಾಕಲು 1261 ಪೋಲಿಯೋ ಬೂತ್‌ಗಳನ್ನು ಸ್ಥಾಪಿಸಲಾಗಿತ್ತು. ಅಂಗನವಾಡಿಗಳು, ಶಾಲೆಗಳು, ಆರೋಗ್ಯ ಕೇಂದ್ರಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳು ಸೇರಿದಂತೆ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪೋಲಿಯೋ ಲಸಿಕೆ ವಿತರಣಾ ಬೂತ್‌ಗಳನ್ನು ಸ್ಥಾಪಿಸಲಾಗಿತ್ತು. ಇದಲ್ಲದೆ, ಅತಿಥಿ ರಾಜ್ಯ ಕಾರ್ಮಿಕರ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಮೊಬೈಲ್ ಬೂತ್‌ಗಳನ್ನು ಸ್ಥಾಪಿಸಲಾಗಿತ್ತು.