ಮಕ್ಕಳ ಆರೋಗ್ಯಕ್ಕಾಗಿ ಪೋಲಿಯೋ ಹನಿ

03kkr1.(3-24
ಕಿಕ್ಕೇರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಯಿತು. ಡಾ.ಸೌಜನ್ಯಾ, ಡಾ. ಸುಪ್ರಿತ್, ಡಾ.ಚಂದನ್, ರಂಗಸ್ವಾಮಿ ಮತ್ತಿತರರಿದ್ದರು.
Published on

ಕಿಕ್ಕೇರಿ: ದೇಶದಲ್ಲಿ ಪೋಲಿಯೋ ಮಾರಣಾಂತಿಕವಾಗಿ ಕಾಡದಿದ್ದರೂ, ುುನ್ನೆಚ್ಚರಿಕೆಯಾಗಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೆ ಪಲ್ಸ್ ಪೋಲಿಯೋ ಹನಿ ಹಾಕಿಸುವಂತೆ ಆಡಳಿತ ವೈದ್ಯಾಧಿಕಾರಿ ಡಾ.ಸೌಜನ್ಯಾ ತಿಳಿಸಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಮಕ್ಕಳಿಗೆ ಲಸಿಕೆ ಹಾಕಿ ಮಾತನಾಡಿದ ಅವರು, 3 ದಿನಗಳವರೆಗೆ ನಡೆಯುವ ಲಸಿಕೆ ಕಾರ್ಯಕ್ರಮವು ಸದೃಢ ಆರೋಗ್ಯಕರ ಸಮಾಜ ಕಟ್ಟಲು ಸಹಕಾರಿಯಾಗಿದೆ. ಭಾರತ ಪೋಲಿಯೋ ಮುಕ್ತವಾಗಿದ್ದರೂ ಹಲವು ದೇಶಗಳಲ್ಲಿ ಕಂಡು ಬಂದಿದೆ. ಹೀಗಾಗಿ ಮುಂಜಾಗೃತವಾಗಿ ಲಸಿಕೆ ಹಾಕಲಾಗುತ್ತಿದೆ. ಇಲ್ಲಿನ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 2978 ಮಕ್ಕಳಿದ್ದು, ಎಲ್ಲರಿಗೂ ಲಸಿಕೆ ಹಾಕುವ ಗುರಿ ಇದೆ. ಮೂರು ದಿನಗಳ ಕಾಲ ಲಸಿಕೆ ಕಾರ್ಯಕ್ರಮ ಇದೆ. ನಾಳೆಯಿಂದ ಮನೆ, ಬಸ್ ನಿಲ್ದಾಣದಂತಹ ಪ್ರಮುಖ ಕೇಂದ್ರದಲ್ಲಿ ಲಸಿಕೆ ಕಾರ್ಯಕ್ರಮ ನಡೆಯಲಿದೆ. ಕಬ್ಬು ಕಟಾವು, ಕೂಲಿ ಕಾರ್ಮಿಕರು ಇರುವಂತಹ ಜನಪ್ರದೇಶಗಳಲ್ಲಿ ವಲಸಿಗ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಸಂಘ ಸಂಸ್ಥೆ, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಡಾ.ಸುಪ್ರಿತ್, ಡಾ.ಚಂದನ್, ಸಿಬ್ಬಂದಿ ರಂಗಸ್ವಾಮಿ, ನಾಗೇಂದ್ರ, ಮಹೇಶ್, ವಿಂಧ್ಯಾ, ಕುಮುದಾ, ಮೇಘಶ್ರೀ, ಆಶಾ ಕಾರ್ಯಕರ್ತೆ ಸುಪ್ರಿಯಾ, ಮಮತಾ, ಧನಲಕ್ಷ್ಮೀ, ಸಿ.ಕೆ. ಪಾರ್ವತಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net