ಗೋಣಿಕೊಪ್ಪದ ವಿವಿಧೆಡೆ ಪೋಲಿಯೋ ಅಭಿಯಾನ

03 gkp 03 nittoor
ನಿಟ್ಟೂರಿನಲ್ಲಿ ಪಂಚಾಯಿತಿ ಸದಸ್ಯರಾದ ಪಡಿಞರಂಡ ಕವಿತಾ ಪ್ರಭು ಮತ್ತು ಬಾಳೆಲೆ ಸಮುದಾಯ ಆರೋಗ್ಯಾಧಿಕಾರಿ ನಿಯಾಜ್ ಮಗುವಿಗೆ ಪೋಲಿಯೋ ಲಸಿಕೆ ಹಾಕಿದರು.
Published on

ಗೋಣಿಕೊಪ್ಪ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗೋಣಿಕೊಪ್ಪದ ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಾಂಕೇತಿಕವಾಗಿ ಮಗುವಿಗೆ ಲಸಿಕೆ ಹಾಕುವ ಮೂಲಕ ಪೊನ್ನಂಪೇಟೆ ತಹಸೀಲ್ದಾರ್ ಎನ್.ಎಸ್.ಪ್ರಶಾಂತ್ ಚಾಲನೆ ನೀಡಿದರು.


ಪೋಲಿಯೋ ಅಭಿಯಾನ ಮಹತ್ವದ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಪಾಲಕರಿಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ, ಡಾ.ಚಂದ್ರಶೇಖರ್ ಇತರರು ಇದ್ದರು.


ಗ್ರಾಪಂ ಅಧ್ಯಕ್ಷೆ ಅಮ್ಮಣಿ ಚಾಲನೆ : ನಿಟ್ಟೂರು ಕಾರ್ಮಾಡು ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ನಿಟ್ಟೂರು ಗ್ರಾಪಂ ಅಧ್ಯಕ್ಷೆ ಅಮ್ಮಣಿ ಚಾಲನೆ ನೀಡಿದರು.
ಉಪಾಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ ಮಾತನಾಡಿ, ಐದು ವರ್ಷದ ಒಳಗಿನ ಪ್ರತಿ ಮಗುವಿನ ಪಾಲಕರು ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ತಮ್ಮ ಮಗುವನ್ನು ಪೋಲಿಯೋನಿಂದ ರಕ್ಷಿಸುವಂತೆ ಸಲಹೆೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ ಮಾತನಾಡಿ, ಭಾರತವು ಪೋಲಿಯೋ ಮುಕ್ತ ದೇಶವಾಗಿದೆ. ಕೆಲ ದೇಶಗಳಲ್ಲಿ ಇನ್ನೂ ಪೋಲಿಯೋ ಭೀತಿ ಇದೆ. ಹೀಗಾಗಿ ಪೋಲಿಯೋ ಅಭಿಯಾನದಲ್ಲಿ ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಿ ಪೋಲಿಯೋ ಭೀತಿಯಿಂದ ದೇಶವನ್ನು ರಕ್ಷಿಸಿಲು ಸಹಕರಿಸಬೇಕೆಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಪಡಿಞರಂಡ ಕವಿತಾ ಪ್ರಭು ಮತ್ತು ಬಾಳೆಲೆ ಸಮುದಾಯ ಆರೋಗ್ಯಾಧಿಕಾರಿ ನಿಯಾಜ್ ಮಗುವಿಗೆ ಪೋಲಿಯೋ ಲಸಿಕೆ ಹಾಕಿದರು. ನಿಟ್ಟೂರು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇಷ್ಮಾ, ಅಂಗನವಾಡಿ ಕಾರ್ಯಕರ್ತೆ ಮಾಲಿನಿ ಸತೀಶ್, ಆಶಾ ಕಾರ್ಯಕರ್ತೆ ಲಲಿತಾ ಗಣೇಶ್ ಮುಂತಾದವರು ಹಾಜರಿದ್ದರು.
ನಲ್ವತ್ತೋಕ್ಲು: ವಿರಾಜಪೇಟೆ ಸಮೀಪದ ನಲ್ವತ್ತೋಕ್ಲು ಗ್ರಾಮದಲ್ಲೂ ಪೋಲಿಯೋ ಲಸಿಕಾ ಅಭಿಯಾನ ನಡೆಯಿತು.

ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಳಗುಂದ ಗ್ರಾ.ಪಂ. ಸದಸ್ಯ ಪಿ.ಎ.ಹನೀಫ್ ಮಗುವಿಗೆ ಪೋಲಿಯೋ ಲಸಿಕೆ ಹಾಕಿ, ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ. ಗ್ರಾಪಂ ಮಾಜಿ ಸದಸ್ಯರಾದ ಚಿಲ್ಲವಂಡ ಕಾವೇರಪ್ಪ, ಸಮುದಾಯ ಸಮುದಾಯ ಆರೋಗ್ಯಾಧಿಕಾರಿ ಕಲಾಂಜಲಿ, ಅಂಗನವಾಡಿ ಕಾರ್ಯಕರ್ತೆಯರಾದ ಎ.ಜಿ.ಕಮಲಾ, ಪಿ.ಎಚ್.ಸಾಕಿರಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net