ಲೋಕ ಚುನಾವಣೆಯಲ್ಲಿ ತಟಸ್ಥ ನೀತಿ

3-kglphoto-2
Published on

ಕೊಳ್ಳೇಗಾಲ : ಪಟ್ಟಣದ ಶ್ರೀ ಬಸವೇಶ್ವರ ನಗರದ ಜಿಪಂ ಮಾಜಿ ಸದಸ್ಯ ಹಾಗೂ ಬಿಎಸ್ಪಿ ರಾಜ್ಯ ಮಾಜಿ ಕಾರ್ಯದರ್ಶಿ ಕಮಲ್ ನಾಗರಾಜು ಬುಧವಾರ ಬೆಂಬಲಿಗರ ಸಭೆ ನಡೆಸಿದರು. ಸಭೆಯಲ್ಲಿ 100 ಕ್ಕೂ ಹೆಚ್ಚು ಜನರ ಭಾಗವಹಿಸಿದ್ದರು.


ಈ ವೇಳೆ ಮಾತನಾಡಿದ ಕಮಲ್ ನಾಗರಾಜು, ನನ್ನನ್ನು ಪಕ್ಷ ಕಡೆಗಣಿಸುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆ ಬಿಎಸ್ಪಿ ಅಭ್ಯರ್ಥಿಯಾಗಿ ನಿವೃತ್ತ ತಹಸೀಲ್ದಾರ್ ಮಹದೇವಯ್ಯ ಅವರನ್ನು ಘೋಷಿಸಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ನೀಡಿಲ್ಲ. ಬಿಎಸ್ಪಿಯ ಈ ಧೋರಣೆಗೆ ಬೇಸತ್ತು ಈ ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ತಿಳಿಸಿದರು. ರೈತ ಮುಖಂಡರಾದ ಶಿವಮೂರ್ತಿ ನಾಯ್ಕ, ಗುರುಸ್ವಾಮಿ, ದಲಿತ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನಿಂಗಣ್ಣ ಉತ್ತಂಬಳ್ಳಿ, ದಲಿತ ಸಂರ್ಘಷ ಸಮಿತಿ ಅಧ್ಯಕ್ಷ ಶಿವಸ್ವಾಮಿ, ಮುಖಂಡರಾದ ಚಿನ್ನಸ್ವಾಮಿ, ಮಹೇಂದ್ರ, ರಾಮಣ್ಣ, ಸುರೇಶ್ ನಾಯ್ಕ, ಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net