ನೀತಿ ಸಂಹಿತೆ ಉಲ್ಲಂಘಿಸಿದ ಇಬ್ಬರ ವಿರುದ್ಧ ದೂರು ದಾಖಲು

Crime Logo
Published on

ಶಿಗ್ಗಾಂವಿ: ಮತದಾನದ ದಿನದಂದು ಪಕ್ಷದ ಚಿಹ್ನೆ ಹಾಗೂ ಅಭ್ಯಥಿರ್ಯ ಹೆಸರು ಇರುವ ಬ್ಯಾನರ್​ಅನ್ನು ಟೇಬಲ್​ ಮೇಲೆ ಹಾಕಿಕೊಂಡು ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಇಬ್ಬರ ವಿರುದ್ಧ ಶಿಗ್ಗಾಂವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಮನುಮರಹಳ್ಳಿಯ ಅನ್ನಪೂರ್ಣ ದೇವೇಂದ್ರಪ್ಪ ಕಮ್ಮಾರ (32) ಹಾಗೂ ಇವರ ಜತೆ ಇದ್ದ ಮತ್ತೊಬ್ಬ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇವರು ಕೆಆರ್​ಎಸ್​ ಪಕ್ಷದ ಹೆಸರು, ಚಿಹ್ನೆ, ಅಭ್ಯಥಿರ್ಯ ಭಾವಚಿತ್ರದ ಬ್ಯಾನರ್​ಅನ್ನು ಜನರಿಗೆ ಕಾಣುವಂತೆ ಟೇಬಲ್​ ಮೇಲೆ ಹಾಕಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net