ಜೀಪ್‌ನಡಿ ಬೈಕ್ ಎಳೆದೊಯ್ದ ಪೇದೆ

bike accident 1
Published on

ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿದ್ದ ಗದಗ ಮೂಲದ ಪೊಲೀಸ್ ಪೇದೆಯೊಬ್ಬರು ನಿಂತಿದ್ದ ಬೈಕ್ ಅನ್ನು ತನ್ನ ಜೀಪ್‌ನಡಿ 3 ಕಿ.ಮೀ. ಎಳೆದೊಯ್ದ ಘಟನೆ ಹುಬ್ಬಳ್ಳಿ ಬೈಪಾಸ್ ಬಳಿ ಭಾನುವಾರ ರಾತ್ತಿ ನಡೆದಿದೆ.

ಗದಗಿನ ಪೊಲೀಸ್ ಅಧಿಕಾರಿ ಶಂಕರ ಚೌಧರಿ ಎನ್ನುವವರಿಗೆ ಈ ಜೀಪ್ ಸೇರಿದೆ. ಈ ಜೀಪ್ ಅನ್ನು ಪೇದೆ ಮುತ್ತಣ್ಣ ಮುಗಳಿ ಎನ್ನವಾತ ಚಲಾಯಿಸಿಕೊಂಡು ಬಂದಿದ್ದ.

ಪೆಟ್ರೋಲ್ ಖಾಲಿಯಾಗಿದ್ದರಿಂದ ರಸ್ತೆ ಪಕ್ಕ ಬೈಕ್ ನಿಲ್ಲಿಸಿದ್ದ ವ್ಯಕ್ತಿಯೊಬ್ಬರು, ಪೆಟ್ರೋಲ್ ತರಲು ಬಂಕ್‌ಗೆ ಹೋಗಿದ್ದರು. ಈ ವೇಳೆ ಅತಿವೇಗವಾಗಿ ಜೀಪ್‌ನೊಂದಿಗೆ ಬಂದ ಪೇದೆ ಮುತ್ತಣ್ಣ ಮುಗಳಿ ಬೈಕ್ ಸಮೇತ 3 ಕಿ.ಮೀ. ಎಳೆದುಕೊಂಡು ಹೋಗಿದ್ದಾನೆ. ಆದರೆ, ಬೈಕ್ ಅವಶೇಷ ಮಾತ್ರ ಇಲ್ಲಿ ಇದ್ದು, ಜೀಪ್ ಚಾಲಕ ಪರಾರಿಯಾಗಿದ್ದಾನೆ. ಬೈಕ್ ಸವಾರಗೆ ಯಾವುದೇ ರೀತಿಯ ಜೀವಹಾನಿಯಾಗಿಲ್ಲ. ಸ್ಥಳಕ್ಕೆ ಡಿಸಿಪಿ ಸಿ.ಆರ್. ರವೀಶ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ದಕ್ಷಿಣ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಎಸ್.ವಿ. ಸತಾರೆ ಅವರಿಗೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net