

ಕೋಟ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣೂರು ನಡುಬೆಟ್ಟು ಕೃಷಿಭೂಮಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮದ್ಯ ಬಾಟಲಿಗಳ ಹಾವಳಿ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕೋಟ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಸ್ಥಳೀಯ ಜನ ಹಾಗೂ ಜನಪ್ರತಿನಿಧಿಗಳೊಂದಿಗೆ ಸಮಸ್ಯೆ ಕುರಿತು ಪೊಲೀಸರು ಚರ್ಚಿಸಿದ್ದಾರೆ. ಕೋಟದ ರೈತ ಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಮಾಹಿತಿ ನೀಡಿ, ಹಲವು ತಿಂಗಳುಗಳಿಂದ ಕೃಷಿ ಭೂಮಿಯಲ್ಲಿ ಬಾಟಲಿಗಳ ಹಾವಳಿಯಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಗೆ ಮನವಿ ಮಾಡಿದರು. ಕೋಟ ಠಾಣಾಧಿಕಾರಿ ರಾಘವೇಂದ್ರ, ಕ್ರೈಂವಿಭಾಗದ ಸುಧಾ ಪ್ರಭು, ಎಎಸ್‌ಐ ಗೋಪಾಲ್ ಪೂಜಾರಿ, ಕೃಷಿಕರು ಇದ್ದರು. ಇತ್ತೀಚೆಗಷ್ಟೇ ಕೃಷಿ ಭೂಮಿಗಳಲ್ಲಿ ಮದ್ಯದ ಬಾಟಿಗಳ ಹಾವಳಿ ಕುರಿತು ವಿಜಯವಾಣಿ ವರದಿ ಪ್ರಕಟಿಸಿ ಜನಪ್ರತಿನಿಧಿಗಳ, ಅಧಿಕಾರಿಗಳ ಎಚ್ಚರಿಸಿತ್ತು.