ವಾಹನದ ಸ್ಟೇರಿಂಗ್​ ಲಾಕ್​ ಆಗಿ ಮಗುಚಿ ಬಿದ್ದ ಪೊಲೀಸರ ವಾಹನ: 25 ಮಂದಿಗೆ ಗಾಯ

madduru acident 1111
Published on

ಮಂಡ್ಯ: ಪೊಲೀಸರು ಪ್ರಯಾಣಿಸುತ್ತಿದ್ದ ವಾಹನ ಮಗುಚಿ ಬಿದ್ದು 25 ಮಂದಿ ಪೊಲೀಸರು ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ತೈಲೂರು ಗ್ರಾಮದಲ್ಲಿ ನಡೆದಿದೆ.

ಆದಿ ಚುಂಚನಗಿರಿ ಜಾತ್ರೆಯ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ವಾಹನದ ಸ್ಟೇರಿಂಗ್​ ಲಾಕ್​ ಆದ ಪರಿಣಾಮ ಅವಘಡ ಸಂಭವಿಸಿದೆ.

ಸಾಗರ್, ರಾಘವೇಂದ್ರ, ರಾಮನಗೌಡ ಹಾಗೂ ಆನಂದ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರ

ಸ್ಥಿತಿ ಚಿಂತಾಜನಕವಾಗಿದೆ. ಉಳಿದವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದಿಚುಂಚನಗಿರಿ ಜಾತ್ರಾ ಉತ್ಸವದ ಅಂಗವಾಗಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ತೈಲೂರು ಬಳಿ ವಾಹನದ ಸ್ಟೇರಿಂಗ್​ ಲಾಕ್​ ಆಗಿ ಪಕ್ಕದ ಹೊಲಕ್ಕೆ ವಾಹನ ಮಗುಚಿ ಬಿತ್ತು. ಕೂಡಲೇ ಸಾರ್ವಜನಿಕರು ನೆರವಿಗೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net