

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಆವತಿ ಬಳಿಯ ನಿಲೇರಿ ಗ್ರಾಮಸ್ಥರನ್ನು ಕಾಡುತ್ತಿದ್ದ ಪೊಲೀಸರ ಗುಂಡಿನ ಭೀತಿಗೆ ತಾತ್ಕಾಲಿಕ ರಿಲ್ೀ ಸಿಕ್ಕಿದೆ.
ಆವತಿಯಲ್ಲಿನ ಪೊಲೀಸ್ ತರಬೇತಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಗುಂಡು ಹಾರಿಸುವ (ಗುರಿ ಪ್ರಾಕ್ಟೀಸ್) ತರಬೇತಿಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೂಚನೆ ನೀಡಿದ್ದು, ಗ್ರಾಮಸ್ಥರ ಭೀತಿಯನ್ನು ದೂರವಾಗಿಸಿದೆ.
ಸುಮಾರು 10 ವರ್ಷದಿಂದ ಗ್ರಾಮದಲ್ಲಿ ಗುಂಡಿನ ಮೊರೆತ ಕೇಳಿಸುತ್ತಿದ್ದು, ಜೀವ ಮುಷ್ಟಿಲ್ಲಿ ಹಿಡಿದು ಬದುಕುವಂತಾಗಿದೆ. ಯಾವಾಗ ಯಾರಿಗೆ ಗುಂಡು ತಗಲುತ್ತದೋ ಎಂಬ ಭೀತಿ ನಡುವೆ ಬದುಕುವಂತಾಗಿದೆ ಎಂದು ಗ್ರಾಮಸ್ಥರು ಶುಕ್ರವಾರ ಭೇಟಿ ನೀಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ತರಬೇತಿ ಕೇಂದ್ರದಿಂದ ಸಿಡಿಯುವ ಗುಂಡುಗಳು ಗ್ರಾಮಕ್ಕೆ ತಗಲುತ್ತಿವೆ. ಹಲವು ಬಾರಿ ವಾಹನಗಳು, ಮನೆಯ ಛಾವಣಿ, ನೀರಿನ ಟ್ಯಾಂಕ್‌ಗಳಿಗೆ ತಗುಲಿವೆ, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಜನರಿಗೆ ಗುಂಡು ತಗುಲಿದ್ದರೆ ಪ್ರಾಣಹಾನಿಯಾಗುತ್ತಿತ್ತು ಎಂದು ಗ್ರಾಮಸ್ಥರು ಅಲವತ್ತುಕೊಂಡರು.
ಪುರಸಭೆಗೆ ಸೇರಿದ ವಾರ್ಡ್: ದೇವನಹಳ್ಳಿ ಪುರಸಭೆ ವ್ಯಾಪ್ತಿಯ 10ನೇ ವಾರ್ಡ್‌ನ ನಿಲೇರಿ ಗ್ರಾಮದಿಂದ 2 ಕಿಮೀ ದೂರದಲ್ಲಿರುವ ಆವತಿ ಪೊಲೀಸ್ ೈರಿಂಗ್ ಪ್ರಾಕ್ಟೀಸ್ ಸೆಂಟರ್‌ನಲ್ಲಿ ವರ್ಷಕ್ಕೆ ಎರಡು ಬಾರಿಯಂತೆ ಪ್ರತಿ ವರ್ಷ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿ ಇನ್ನಿತರ ಜಿಲ್ಲೆಯ ಪೊಲೀಸ್ ತುಕಡಿಗಳಿಗೆ ಗುಂಡು ಹಾರಿಸುವ ತರಬೇತಿ ಆಯೋಜಿಸಲಾಗುತ್ತದೆ. ಅಭ್ಯಾಸ ಮಾಡುವ ವೇಳೆ ಸಿಡಿಯುವ ಗುಂಡುಗಳು ಗ್ರಾಮಕ್ಕೂ ತಾಕುತ್ತಿವೆ ಎನ್ನಲಾಗಿದೆ.
2022ರಲ್ಲೇ ದೂರು: ಗುಂಡುಗಳು ಗ್ರಾಮವನ್ನು ಹೊಕ್ಕುತ್ತಿರುವ ಬಗ್ಗೆ 2022ರಲ್ಲಿ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿ, ಕೂಡಲೇ ತರಬೇತಿ ಕೇಂದ್ರವನ್ನು ಸ್ಥಳಾಂತರಗೊಳಿಸುವಂತೆ ಒತ್ತಾಯ ಮಾಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಇತ್ತ ಸುಳಿದಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಇದೇ ರೀತಿ ಗುಂಡುಗಳು ಗ್ರಾಮವನ್ನು ಹೊಕ್ಕು ವಾಹನಗಳು, ಮನೆಯ ಛಾವಣಿಯನ್ನು ಹಾನಿಗೊಳಿಸಿದ್ದವು. ಈ ಬಗ್ಗೆ ಆತಂಕಗೊಂಡ ಗ್ರಾಮಸ್ಥರು ಎಸ್‌ಪಿ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಪಿ ಸೇರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶುಕ್ರವಾರ ಆವತಿಯ ಪೊಲೀಸ್ ತರಬೇತಿ ಕೇಂದ್ರ ಹಾಗೂ ನಿಲೇರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಂಡೆಗಳಿಗೆ ಶೂಟ್: ಪೊಲೀಸರಿಗೆ ಗುಂಡು ಹಾರಿಸುವ ತರಬೇತಿ ನೀಡಲು ಈ ಕೇಂದ್ರ ಆರಂಭಿಸಲಾಗಿದೆ. ಬಂಡೆಗಳನ್ನು ಗುರಿಯಾಗಿಸಿ ಗುಂಡು ಹಾರಿಸಲಾಗುತ್ತದೆ. ಕೆಲವೊಮ್ಮೆ ಗುರಿ ತಪ್ಪಿ ಏರ್‌ೈರಿಂಗ್ ಆದಾಗ ಸುಮಾರು ಎರಡ್ಮೂರು ಕಿಮೀ ವರೆಗೆ ಗುಂಡು ಹಾರುತ್ತವೆ. ಆದರೆ ಹಾರಿದ ಬೀಳುವ ಹೊತ್ತಿಗೆ ಪವರ್ ಕಳೆದುಕೊಂಡಿರುತ್ತವೆ. ಆದರೂ ಗ್ರಾಮಸ್ಥರ ಹಿತದೃಷ್ಟಿಯಿಂದ ರಕ್ಷಣಾ ಕ್ರಮ ಕೈಗೊಳ್ಳುವವರೆಗೆ ತರಬೇತಿ ಆರಂಭಿಸದಂತೆ ಹಿರಿಯ ಪೊಲೀಸರು ಸೂಚನೆ ನೀಡಿಸಿದ್ದಾರೆ.
ಈ ಹಿಂದೆಯೂ ೈರಿಂಗ್ ಸಮಯದಲ್ಲಿ ಗುಂಡುಗಳು ಗ್ರಾಮಕ್ಕೆ ಹೊಕ್ಕಿ ಕಾರು, ಮನೆಯ ಛಾವಣಿ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಗ್ರಾಮಸ್ಥರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ತರಬೇತಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಗುಂಡುಗಳು ಗ್ರಾಮ ಹೊಕ್ಕದಂತೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಪರಿಶೀಲನೆ ನಡೆಸುತ್ತೇವೆ.
ಮಲ್ಲಿಕಾರ್ಜುನ ಬಾಲದಂಡಿ, ಗ್ರಾಮಾಂತರ ಎಸ್‌ಪಿ