

ಐಮಂಗಲ: ಮೊಬೈಲ್ ಬಳಕೆಯಿಂದ ಮಿದುಳಿಗೆ ಒತ್ತಡ ಹೆಚ್ಚಾಗಿ ಬ್ರೈನ್‌ಟ್ಯೂಮರ್, ನರರೋಗ ಹಾಗೂ ದೃಷ್ಟಿದೋಷಗಳಿಗೆ ಕಾರಣವಾಗಲಿದೆ ಎಂದು ತುಮಕೂರು ಸಿದ್ಧಗಂಗಾ ಆಸ್ಪತ್ರೆ ನರರೋಗ ತಜ್ಞ ಡಾ. ವಿವೇಕ್‌ವಿಠಲ್‌ರಾವ್ ಹೇಳಿದರು.
ಗ್ರಾಮದ ಪೊಲೀಸ್ ತರಬೇತಿ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಸೇವಾನಿರತ ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ವಾತನಾಡಿದರು.
ಮೊಬೈಲ್‌ನಿಂದ ಬರುವ ಬಳಸುತ್ತಿದ್ದು, ಅದರಿಂದ ಬರುವ ರೇಡಿಯೇಷನ್‌ಗಳು ಮೆದುಳು ಹಾಗೂ ನರಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಚಿಕ್ಕ ವಯಸ್ಸಿಗೇ ನರರೋಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನರಗಳು ದಪ್ಪ ಆಗಿ ಸಮರ್ಪಕವಾಗಿ ರಕ್ತ ಸಂಚಾರ ಆಗದೆ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದರು.
ಮೊಬೈಲ್ ವೀಕ್ಷಣೆಯಿಂದ ಜ್ಞಾಪಕ ಶಕ್ತಿ, ಮನೋ ನಿಗ್ರಹ, ಏಕಾಗ್ರತೆ, ತಾಳ್ಮೆ ಕಡಿಮೆಯಾಗಿ ಸಿಡುಕುತನ ಹೆಚ್ಚಾಗುತ್ತದೆ. ಆದ್ದರಿಂದ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.
ಹದ್ರೋಗ ತಜ್ಞ ಡಾ.ರವಿಚಂದ್ರ ವಾತನಾಡಿ, ಅಧಿಕ ಒತ್ತಡ, ಅನಗತ್ಯ ಆಲೋಚನೆ, ದುಶ್ಚಟಗಳಿಂದ ಹದಯಕ್ಕೆ ಸಂಪರ್ಕ ಹೊಂದಿರುವ ಎಲ್ಲ ರಕ್ತನಾಳಗಳು ದುರ್ಬಲವಾಗಿ ಹದಯಾಘಾತ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಸಹ ಹದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.
ಮಧುಮೇಹ, ರಕ್ತದೊತ್ತಡ, ವಾನಸಿಕ ಒತ್ತಡ ಹಾಗೂ ಕೊಬ್ಬು ನಿಯಂತ್ರಿಸಿದಲ್ಲಿ ಹದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಬಹುದು. ಜಂಗ್‌ಫುಡ್, ಬೇಕರಿ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.
ಆರು ತಿಂಗಳಿಗೊಮ್ಮೆ ಮಧುಮೇಹ, ರಕ್ತದೊತ್ತಡ ಪರೀಕ್ಷಿಸಿಕೊಂಡು ಉತ್ತಮ ಚಿಕಿತ್ಸೆ ಪಡೆದುಕೊಳ್ಳಬೇಕು. ಹದಯಾಘಾತವಾದಾಗ ಎದೆನೋವು, ಎಡಗೈ ಭಾಗ ನೊವುಂಟಾಗುವುದು, ತಲೆ ಸುತ್ತುವುದು, ದವಡೆ, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹದ್ರೋಗ ತಜ್ಞರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಹಾಗೂ ಎಸ್ಪಿ ಪಿ.ಪಾಪಣ್ಣ, ಡಿವೈಎಸ್ಪಿ ಬಿ.ಪರಶುರಾಮ್, ಆರ್‌ಎಸ್‌ಐ ಮಂಜುನಾಥ್ ಬಿದರಿಕೊಪ್ಪ, ಸಿದ್ದಗಂಗಾ ಆಸ್ಪತ್ರೆಯ ವೈದ್ಯೆ ಡಾ.ನವ್ಯ, ಸಂತೋಷ್ ಇತರರಿದ್ದರು.