ಕಳೆದು ಹೋದ ಆಭರಣವನ್ನು ತಾಸಿನಲ್ಲೇ ಹುಡುಕಿಕೊಟ್ಟ ಪೊಲೀಸರು

IMG-20230320-WA0165
Published on

ಸಿದ್ದಾಪುರ: ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಕಳೆದುಕೊಂಡಿದ್ದ

ಆಭರಣವನ್ನು ಪೊಲೀಸರು ಒಂದು ಗಂಟೆಯಲ್ಲಿ ಹುಡುಕಿದ್ದಾರೆ.

ಕಾನಗೋಡ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ವಿನಯ ನಾಯ್ಕ ಕಾನಗೋಡ ದಿಂದ ಅವರಗೋಪ್ಪ ಕ್ಕೆ ಶಾಲೆಗೆ ಹೋಗುವಾಗ ಬಳ್ಳಟ್ಟೆ ಹತ್ತಿರ ಸುಮಾರು ನಾಲ್ಕು ಲಕ್ಷ ರೂ. ಮೌಲ್ಯದ 7 ತೊಲ ಬಂಗಾರದ ಆಭರಣ ಹಾಗೂ ಮೊಬೈಲ್ ಅವರ ಬ್ಯಾಗ್ ನಿಂದ ಬಿದ್ದು ಹೋಗಿತ್ತು. ತಕ್ಷಣ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಕಾರ್ಯ ಪ್ರವೃತ್ತರಾದ ಪಿಎಸ್ಐ ಮಲ್ಲಿಕಾರ್ಜುನಯ್ಯ ಕೊರಾಣಿ, ಹೆಡ್ ಕಾನ್ಸ್ಟೇಬಲ್ ರಮೇಶ ಕೂಡಲ, ಸಿಬ್ಬಂದಿ ಉದಯ್ ಮೆಸ್ತ , ಸಂಗೀತಾ ಕಾನಡೆ ರವರು ಒಂದು ಗಂಟೆ ಒಳಗಡೆ ಮೊಬೈಲ್ ಟ್ರೇಸ್ ಮಾಡಿ ಸೊರಬಕ್ಕೆ ಹೋಗಿ ಕಳೆದುಕೊಂಡ ವಸ್ತುಗಳನ್ನು ಹುಡುಕಿ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net