ನಯ ವಂಚಕ ಬೈಕ್​ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ

Police succeed in arresting a cunning bike thief
Published on

ಜಮಖಂಡಿ:ಪೊಲೀಸ್​ರೊಂದಿಗೆ ಒಳ್ಳೆ ಒಡನಾಟದೊಂದಿಗೆ ಇದ್ದು ಬೈಕ್​ ಕಳ್ಳತನ ಮಾಡುತಿದ್ದ ಚಾಲಾಕಿ ಬೈಕ್​ ಕಳ್ಳನನ್ನ ಜಮಖಂಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಗರ ಹಾಗೂ ಗ್ರಾಮಿಣ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತಿದ್ದ ಆರೋಪಿ ತಾಲೂಕಿನ ಇನಾಂ ಹಂಚಿನಾಳ ಪುನರ್ವಸತಿ ಕೇಂದ್ರದ ಸಿದ್ದಪ್ಪ ಯಲ್ಲಪ್ಪ ಉಪ್ಪಲದಿನ್ನಿಯನ್ನು ಪೊಲೀಸ್​ರು ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.

ನಗರದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಂದಾಜು 10 ಲ ರೂ. ಮೌಲ್ಯದ 22 ಬೆಕ್​ಗಳನ್ನು ಆರೋಪಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಬೈಕ್​ ಕಳ್ಳತನ ಬಗ್ಗೆ ಪೊಲೀಸ್​ರಿಗೆ ಸಂಶಯ ಬರಬಾರದೆಂದು ಆರೋಪಿ ಸಿದ್ದು ಉಪ್ಪಲದಿನ್ನಿ ಪೊಲೀಸ್​ರೊಂದಿಗೆ ಒಳ್ಳೆ ಒಡನಾಟದಿಂದ ಇರುತಿದ್ದ ಅವನ ನಡುವಳಿಕೆಯಲ್ಲಿ ಸಂದೇಹ ಪಟ್ಟ ಪೊಲೀಸರು ತನಿಖೆ ನಡೆಸಿದಾಗ ಕಳ್ಳತನ ಕೃತ್ಯ ಬಯಲಾಗಿದೆ.

ನಗರದ ಕೋಷ್ಠಿ ಗಲ್ಲಿಯ ನಿವಾಸಿ ಅಪ್ಪಾಸಾಹೇಬ ಬಿರಾದಾರ ಅವರು ಜೂನ್​ 9 ರಂದು ಕೂಂಚನೂರ ಸರ್ಕಲ್​ಬಳಿ ಬೈಕ್​ ಕಳ್ಳತನವಾದ ಬಗ್ಗೆ ನಗರ ಪೊಲಿಸ್​ ಠಾಣೆಯಲ್ಲಿ ದೂರು ನೀಡಿದ್ದರು.ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್​, ಹೆಚ್ಚುವರಿ ಪೊಲೀಸ್​ ಅಧೀಕ (ಅಪರಾಧ) ಮಹಾಂತೇಶ್ವರ ಜಿದ್ದಿ, ಡಿವೈಎಸ್​ಪಿ ಎಸ್​ ರೋಷನ್​ ಜಮೀರ್​ ಮಾರ್ಗದರ್ಶನದಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ ನೇತೃತ್ವದಲ್ಲಿ ಪಿಎಸ್​ಐ ಅನಿಲ್​ ಕುಂಬಾರ, ಅಪರಾಧ ವಿಭಾಗದ ಪಿಎಸ್​ಐ ಎನ್​.ಕೆ.ಕಾಜಗಾರ, ಸಿಬ್ಬಂದಿಗಳಾದ ಸಂಗಪ್ಪ ಕೋಟಿ, ಪರಶುರಾಮ ಘಾಟಗೆ, ಪ್ರಕಾಶ ಹೊಸಮನಿ, ಮುತ್ತಪ್ಪ ಮಾಂಗ, ಮಲ್ಲಿಕಾರ್ಜುನ ತಂಬಾಕದ, ಸಿದ್ದು ಕಲಾಠಿ, ನಾಗರಾಜ ಬಿಸಲದಿನ್ನಿ, ಶಂಕರ ಆಸಂಗಿ, ಐ.ಎಂ. ಪೆಂಡಾರಿ, ರಾಜಶೇಖರ ಮನಗೂಳಿ ತಂಡ ಕಾರ್ಯಾಚರಣೆ ನಡೆಸಿದ್ದರು. ಕಳ್ಳತನ ಬೇಧಿಸಿದ ಇಲಾಖೆ ಸಿಬ್ಬಂದಿಗಳಿಗೆ ಎಸ್ಪಿ ಸಿದ್ದಾರ್ಥ ಗೋಯಲ್​ ಬಹುಮಾನ ೂಷಿಸಿದ್ದಾರೆ.

ಜಮಖಂಡಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನವಾಗಿದ್ದ ಬೈಕ್​ಗಳನ್ನು ಪೊಲೀಸ್​ರು ವಶಕ್ಕೆ ಪಡೆದುಕೊಂಡಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net