ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯ

6 kagwad 1-Web
ಕಾಗವಾಡ ಜೈನ ಸಮಾಜದವರಿಂದ ಪಟ್ಟಣದ ಪೊಲೀಸ್ ಠಾಣೆ ಸಿಬ್ಬಂದಿಗೆ ಆಹಾರ ಪದಾರ್ಥ ವಿತರಿಸಲಾಯಿತು. ಕಾಗವಾಡ ಜೈನ ಸಮಾಜದ ಅಧ್ಯಕ್ಷ ಟಿ.ಕೆ. ದೊತರೆ, ಕಾರ್ತಿಕ ದೇಸಾಯಿ, ಸಚಿನ ಉಗಾರೆ ಇತರರು ಇದ್ದರು.
Published on

ಕಾಗವಾಡ: ದೇಶದಲ್ಲಿ ಮಾರಕ ರೋಗ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ವೈದ್ಯಕೀಯ, ಪೊಲೀಸ್ ಹಾಗೂ ಮಾಧ್ಯಮ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಕಾಗವಾಡದ ನಿವೃತ್ತ ನ್ಯಾಯಾಧೀಶ ಪ್ರಕಾಶ ಕಠಾರೆ ಹೇಳಿದ್ದಾರೆ.

ಸೋಮವಾರ ಪಟ್ಟಣದಲ್ಲಿ ಭಗವಾನ ಮಹಾವೀರ ಜಯಂತಿ ಅಂಗವಾಗಿ ಕಾಗವಾಡ ಜೈನ ಸಮಾಜದಿಂದ ಹಮ್ಮಿಕೊಂಡಿದ್ದ ಕರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಶ್ರಮಿಸುತ್ತಿರುವ ಸಿಬ್ಬಂದಿಗೆ ಆಹಾರ ಪದಾರ್ಥ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಗವಾಡ ಜೈನ ಸಮಾಜದ ಅಧ್ಯಕ್ಷ ಟಿ.ಕೆ. ದೊತರೆ, ಕಾರ್ತಿಕ ದೇಸಾಯಿ, ಸಚಿನ ಉಗಾರೆ, ಕಾಕಾಸಾಬ ಚೌಗಲಾ, ಅಪ್ಪಾಸಾಬ ಗೋಬಾಜೆ, ಸುಧೀರ ಹುದ್ದಾರ, ಅರಿಹಂತ ಉಪಾಧ್ಯೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net