ಪೊಲೀಸರನ್ನು ನೋಡಿ ಮಹಿಳಾ ಪ್ಯಾಸೆಂಜರ್ ಗಳನ್ನು ಅರ್ಧದಲ್ಲೇ ಬಿಟ್ಟು ಹೋದ ಆಟೋ ಡ್ರೈವರ್, ಮಾನವೀಯತೆ ಮೆರೆದ ಪೊಲೀಸ್

IMG-20210510-WA0022_600x400
Published on

ಚಿಕ್ಕಬಳ್ಳಾಫುರ; ಲಾಕ್ಡೌನ್ ನಿಂದ ಏನೂ ಸಿಗದೇ ನಡುರಸ್ತೆಯಲ್ಲಿ ನಿಂತು ಅಸ್ವಸ್ಥಗೊಂಡಿದ್ದ ಮಹಿಳೆಯರನ್ನು ರಕ್ಷಿಸಿ ಪೊಲೀಸರು ಮಾನವೀಯತೆ ಮೆರೆದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.

ಗೂಳೂರು ಗ್ರಾಮದಿಂದ ಬಾಗೇಪಲ್ಲಿ ಪಟ್ಟಣಕ್ಕೆ ಬಂಧಿದ್ದ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷನನ್ನು ಪೊಲೀಸರು ರಕ್ಷಿಸಿದ್ದಾರೆ. ಆಟೋದಲ್ಲಿ ಬಾಗೇಪಲ್ಲಿ ಪಟ್ಟಣಕ್ಕೆ ಆಗಮಿಸಿದ್ದ ವ್ಯಕ್ತಿಗಳು ಪಟ್ಟಣದಲ್ಲಿ ಪೊಲೀಸ್ ನಾಕಬಂದಿ ಕಂಡು ಆಟೋ ಚಾಲಕ ದೂರದಲ್ಲಿ ನಿಲ್ಲಿಸಿ ಹೋರಟುಹೋಗಿದ್ದ.

ಸಕಾಲಕ್ಕೆ ಅನ್ನ ಆಹಾರ ಇಲ್ಲದೆ ಅಸ್ವಸ್ಥಗೊಂಡಿದ್ದ ಮಹಿಳೆಯರಿಗೆ ಕಾನಸ್ಟೇಬಲ್ ಧನಂಜಯ ತನ್ನ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ.

ಕರೊನಾ ತಡೆಗಟ್ಟಲು ಮೇ 24 ರವರೆಗೆ ಲಾಕ್ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜನ ಸಂಚಾರ ತಡೆಯಲು ಪೊಲೀಸ್ ಹರಸಾಹಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net