ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡೇಟು

h8-firing
Published on

ಹುಬ್ಬಳ್ಳಿ: ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಪೊಲೀಸರು ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ರೌಡಿಶೀಟರೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಇಲ್ಲಿಯ ಆನಂದ ನಗರದ ಹೊರವಲಯದಲ್ಲಿ ಮಂಗಳವಾರ ನಡೆದಿದೆ.

ಗುಂಡೇಟು ತಿಂದಿರುವ ಮಲಿಕ್ ಅಧೋನಿ ಹಾಗೂ ಹಲ್ಲೆಗೊಳಗಾದ ಪಿಎಸ್‌ಐ ವಿಶ್ವನಾಥ, ಪೇದೆಗಳಾದ ಕಲ್ಲನಗೌಡ, ಶರೀಫ ಅವರನ್ನೂ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿ ವಿಚಾರಿಸಿದ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಣಕಾಸು ವಿಷಯದಲ್ಲಿ ಮಲ್ಲಿಕ್ ಹಾಗೂ ಇರ್ಫಾನ್ ಎಂಬಾತನ ನಡುವೆ ಗಲಾಟೆಯಾಗಿತ್ತು. ಇರ್ಫಾನ್ ಬಳಿ ಮಲಿಕ್ ಹಣ ಪಡೆದುಕೊಂಡಿದ್ದು, ಹಣ ವಾಪಸ್ ಕೇಳಿದ ಹಿನ್ನೆಲೆಯಲ್ಲಿ ಮಲಿಕ್ ಮತ್ತವನ ಸ್ನೇಹಿತರು ಹಾಗೂ ಇರ್ಫಾನ್ ಮಧ್ಯೆ ಗಲಾಟೆಯಾಗಿತ್ತು. ಗಾಯಗೊಂಡಿದ್ದ ಇರ್ಫಾನ್ ಮತ್ತವನ ಸ್ನೇಹಿತರು ಕೆಎಂಸಿಆರ್‌ಐನಲ್ಲಿ ದಾಖಲಾಗಿದ್ದರು. ಸ್ಥಳ ಮಹಜರ್ ಮಾಡಲು ನಗರದ ಹೊರವಲಯಕ್ಕೆ ಹೊಲೀಸರು ಮಲಿಕ್‌ನನ್ನು ಕರೆದೊಯ್ದಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಕಾಲಿಗೆ ಗುಂಡು ಹೊಡೆಯಲಾಗಿದೆ. ಮೂವರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದವರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net