ಮದುವೆ ಮನೆಯಿಂದ ತಡರಾತ್ರಿ ಧ್ವನಿವರ್ಧಕ ವಶಕ್ಕೆ ಪಡೆದ ಪೊಲೀಸರು

 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು : ತಡರಾತ್ರಿ ಧ್ವನಿವರ್ಧಕ ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮದುವೆ ಔತಣಕೂಟದ ಮನೆಯೊಂದರಿಂದ ಪೊಲೀಸರು ಸೌಂಡ್ ಸಿಸ್ಟಂನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇ 11ರಂದು ರಾತ್ರಿ 11.30ರ ವೇಳೆಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ರಸ್ತೆಯ ಮನೆಯೊಂದರಲ್ಲಿ ಹಾಕಿರುವ ಧ್ವನಿವರ್ಧಕದ ಶಬ್ದದಿಂದ ಕಿರಿಕಿರಿಯಾಗುತ್ತಿರುವ ಬಗ್ಗೆ ಸಾರ್ವಜನಿಕರೋರ್ವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಮದುವೆ ಕಾರ್ಯಕ್ರಮದ ಔತಣ ಕೂಟದ ಅಂಗವಾಗಿ ಸೌಂಡ್ ಸ್ಪೀಕರ್ ಹಾಡುಗಳನ್ನು ಹಾಕಿರುವುದು ಕಂಡುಬಂದಿದೆ. ಈ ಬಗ್ಗೆ ಮನೆಯವರಾಗಲೀ ಅಥವಾ ಸೌಂಡ್ಸ್ ಸಿಸ್ಟಂ ನ ನಿರ್ವಾಹಕರಾಗಲೀ ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆದಿರಲಿಲ್ಲ. ಅಲ್ಲದೆ ನಿಗದಿತ ಕಾಲಮಿತಿಯ ಅನಂತರವೂ ಸೌಂಡ್ ಸ್ಪೀಕರ್ ಬಳಸಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟಾಗಿದ್ದರಿಂದ ಸೌಂಡ್ ಸ್ಪೀಕರ್, ಕೇಬಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net