67 ಬೈಕ್ ವಶಕ್ಕೆ ಪಡೆದ ಪೊಲೀಸರು

20 LXR 1
ಲಕ್ಷ್ಮೇಶ್ವರದಲ್ಲಿ ಪೋಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ ದೋಷಪೂರಿತ ಬೈಕ್ ಸೈಲೆನ್ಸರ್ ವಶಪಡಿಸಿಕೊಂಡರು. ಡಿವೈಎಸ್‌ಪಿ ಎಂ.ಬಿ. ಸುಂಕದ. ಸಿಪಿಐ ವಿಕಾಸ ಲಮಾಣಿ, ಇತರರಿದ್ದರು.
Published on

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ದೋಷಪೂರಿತ ಸೈಲೆನ್ಸರ್ ಅಳವಡಿಸಿದ್ದ 21 ಬೈಕ್ ಹಾಗೂ ಅಪ್ರಾಪ್ತರು ಚಲಾಯಿಸುತ್ತಿದ್ದ 46 ಬೈಕ್ ಸೇರಿ 67 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಶಿಗ್ಲಿ ನಾಕಾ, ಪಂಪವೃತ್ತ, ಸವಣೂರ ಕ್ರಾಸ್, ವಿದ್ಯಾರಣ್ಯ ವೃತ್ತ, ಆಸಾರ, ಭಾನು ಮಾರ್ಕೆಟ್ ಸೇರಿ ಪ್ರಮುಖ ಮಾರ್ಗದಲ್ಲಿ ಬರುತ್ತಿದ್ದ ಬೈಕ್ ಸವಾರರನ್ನು ಪರಿಶೀಲಿಸಿ, ಅಪ್ರಾಪ್ತ ಮತ್ತು ನಿಗದಿತ ಮಿತಿಗಿಂತ ಹೆಚ್ಚು ಅಬ್ಬರ ಮಾಡುವ ಸೈಲೆನ್ಸರ್ ಅಳವಡಿಸಿದ್ದ ಬೈಕ್‌ಗಳನ್ನು ವಶಪಡಿಸಿಕೊಂಡರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಹಾಗೂ ಮೂವರು ಸಿಪಿಐ, 6 ಪಿಎಸ್‌ಐ ಸೇರಿ 50ಕ್ಕೂ ಹೆಚ್ಚು ಪೊಲೀಸರು ಕಾರ್ಯಚರಣೆ ನಡೆಸಿದರು. ಗ್ಯಾರೇಜ್, ಇನ್ನಿತರ ಸ್ಥಳಗಳಲ್ಲಿದ್ದ ದೋಷಪೂರಿತ ಸೈಲೆನ್ಸರ್ ಜಪ್ತಿ ಮಾಡಲಾಯಿತು.

ಡಿವೈಎಸ್ಪಿ ಎಂ.ಬಿ. ಸಂಕದ ಮಾತನಾಡಿ, ಜಿಲ್ಲೆಯಲ್ಲಿ ದೋಷಪೂರಿತ ಸೈಲೆನ್ಸರ್ ಅಳವಡಿಸಿ ತಿರುಗಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಪಾಲಕರು ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ಬೈಕ್ ಕೊಡುವುದನ್ನು ಬಿಡಬೇಕು. ವಶಪಡಿಸಿಕೊಂಡ ಬೈಕುಗಳಿಗೆ ದಂಡ ವಿಧಿಸಲಾಗುವುದು ಎಂದರು. ಸಿಪಿಐ ವಿಕಾಸ ಲಮಾಣಿ, ಬಿ.ಎಸ್. ಸುಬ್ಬಾಪುರಮಠ, ಅಶೋಕ ಸದಲಗಿ, ಪಿಎಸ್‌ಐ ಯೂಸುಫ್ ಜಮುಲಾ, ವಿ.ಜಿ ಪವಾರ, ವಿಜಯ ತಳವಾರ, ಎಸ್.ಎ. ಶಕುಂತಲಾ, ನೂರಜಹಾನ, ಎಸ್.ಬಿ. ಕವಲೂರ, ಗಿರಿಜಾ ಜಕ್ಕಲಿ ಸೇರಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net