6 ಲಕ್ಷ ರೂ. ಮೌಲ್ಯದ ಗಾಂಜಾ ವಶ

drug
Published on

ಡುಪಿ: ಮಣಿಪಾಲ, ಮಲ್ಪೆ ಸೇರಿದಂತೆ ವಿವಿಧೆಡೆಗೆ ಸಾಗಾಟ ಮಾಡಲು ಹೈದರಾಬಾದಿನಿಂದ ತರುತ್ತಿದ್ದ ಬರೋಬ್ಬರಿ 6,09,000 ರೂ ಮೌಲ್ಯದ 20 ಕೆಜಿ 614 ಗ್ರಾಂ ಗಾಂಜಾವನ್ನು ಶನಿವಾರ ಉಡುಪಿ ಸೆನ್ ಅಪರಾಧ ಪೋಲಿಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ವಿಜಯಕುಮಾರ್ ಎಸ್. (23), ನಿಕ್ಷೇಪ್ ಎಸ್.ವಿ (24), ನಿತೇಶ್ ಕುಮಾರ್ (24) ಬಂಧಿತರು. ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ ಇವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಲಾಗಿದ್ದು, ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಹೆಬ್ರಿ ಕಡೆಯಿಂದ ಉಡುಪಿಗೆ ಬರುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಆರೋಪಿಗಳಿಂದ ಮೂರು ಮೊಬೈಲ್, ಕಾರು ಸೇರಿದಂತೆ ಒಟ್ಟು 15,30,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net