ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಅರ್ಚಕನನ್ನು ಆಸ್ಪತ್ರೆಗೆ ಸೇರಿಸಿದ ಪೊಲೀಸರು

Published on

ಈಶ್ವರಮಂಗಲ: ದುರ್ವರ್ತನೆ ಆರೋಪದ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಕೆಲಸ ಕಳೆದುಕೊಂಡ ಶಿರಸಿ ಮೂಲದ ಸಹಾಯಕ ಅರ್ಚಕರೊಬ್ಬರು ಅಮಲು ಪದಾರ್ಥ ಸೇವಿಸಿ ಪಾನಮತ್ತರಾಗಿ ದರ್ಬೆ ವೃತ್ತದಲ್ಲಿ ತೂರಾಡುತ್ತಿರುವುದನ್ನು ಗಮನಿಸಿದ ಹೊಯ್ಸಳ 112 ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

8 ತಿಂಗಳ ಹಿಂದೆ ಪುತ್ತೂರು ತಾಲೂಕಿನ ದೇವಸ್ಥಾನವೊಂದರಲ್ಲಿ ಸಹಾಯಕ ಅರ್ಚಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಶಿರಸಿ ಮೂಲದ ಶಂಕರ್ ಹೆಬ್ಬಾರ್ ಎಂಬುವರ ವರ್ತನೆ ಸರಿಯಿಲ್ಲದ ಕಾರಣ 20 ದಿನಗಳ ಹಿಂದೆ ಅವರ ಸಂಬಳ ಚುಕ್ತಾಗೊಳಿಸಿ ಕೆಲಸದಿಂದ ಕೈಬಿಡಲಾಗಿತ್ತು.
ಕೆಲಸದಿಂದ ಅವರನ್ನು ಬಿಡುಗಡೆಗೊಳಿಸಿದ ಬಳಿಕವೂ ಊರಿಗೆ ತೆರಳದೆ ಪುತ್ತೂರಿನಲ್ಲೇ ಇದ್ದ ಅವರು ಭಾನುವಾರ ರಾತ್ರಿ ದರ್ಬೆ ವೃತ್ತದಲ್ಲಿ ತೂರಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net