

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆಯಲ್ಲಿ ಪ್ರಸಿದ್ಧಿ ಪಡೆದಿರುವ ಧಮ್ ಬಿರಿಯಾನಿ ಹೋಟೆಲ್‌ಗಳಿಗೆ ಪೊಲೀಸರು ಶಾಕ್ ನೀಡಿದ್ದು ಮುಂಜಾನೆ 4 ಗಂಟೆಗೆ ಹೋಟೆಲ್ ತೆರೆಯದಂತೆ ಕಟ್ಟುನಿಟ್ಟಿನ ಆದೇಶ ರವಾನಿಸಿದ್ದಾರೆ. ನಸುಕಿನಲ್ಲೇ ತೆರೆಯುತ್ತಿದ್ದ ಹೋಟೆಲ್‌ಗಳ ಮುಂದೆ ಬೆಳಗ್ಗೆ 6 ಗಂಟೆಗೆ ನಂತರ ಬಿರಿಯಾನಿ ದೊರೆಯಲಿದೆ ಎಂಬ ನಾಮಲಕಗಳು ಕಂಡುಬರುತ್ತಿವೆ.
6 ಗಂಟೆಗೆ ಅನುಮತಿ: ಜಿಲ್ಲೆಯಲ್ಲಿ ಹೊಸಕೋಟೆ ಎಂದರೆ ತಕ್ಷಣ ನೆನಪಿಗೆ ಬರುವುದು ಧಮ್ ಬಿರಿಯಾನಿ. ಅದರಲ್ಲೂ ಮುಂಜಾನೆ 4 ಗಂಟೆಗೆ ಹಬೆಯಾಡುವ ಬಿರಿಯಾನಿ ಸವಿಯುವ ದೃಶ್ಯ ಎಲ್ಲೆಡೆ ಪ್ರಸಿದ್ಧಿ ಪಡೆದಿತ್ತು. ಇದಕ್ಕಾಗಿ ನೆರೆ ಜಿಲ್ಲೆ ಸೇರಿ ಅಕ್ಕಪಕ್ಕದ ರಾಜ್ಯದ ಬಿರಿಯಾನಿ ಪ್ರಿಯರು ದಂಡೆತ್ತಿ ಬರುವಂತೆ ಬರುತ್ತಿದ್ದರು. ಆದರೆ ಇನ್ನು ಮುಂದೆ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ. 4 ಗಂಟೆಗೆ ಬದಲಿಗೆ 6 ಗಂಟೆಗೆ ಹೋಟೆಲ್ ತೆರೆಯುವಂತೆ ಬಿರಿಯಾನಿ ಹೋಟೆಲ್ ಮಾಲೀಕರಿಗೆ ಆದೇಶ ರವಾನೆಯಾಗಿದೆ.
ಬೆಂಗಳೂರಿಗರೇ ಹೆಚ್ಚು: ಬೆಂಗಳೂರಿನಿಂದ ಸುಮಾರು 40 ಕಿ.ಮೀ ಅಂತರವಿರುವ ಹೊಸಕೋಟೆ ಕೆಲ ವರ್ಷಗಳಿಂದ ಮುಂಜಾನೆ ಬಿರಿಯಾನಿಗೇ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಈ ಹೋಟೆಲ್‌ಗಳಿಗೆ ಬೆಂಗಳೂರಿಗರೇ ಬಹುತೇಕ ಗ್ರಾಹಕರು. ಮಧ್ಯರಾತ್ರಿಯಿಂದಲೇ ಪ್ರಯಾಣ ಬೆಳೆಸಿ ನಸುಕಿನ 4 ಗಂಟೆಗೆ ಬಿರಿಯಾನಿ ಗಂಟಲಿಗಿಳಿಸಿಕೊಳ್ಳುವ ಅಭ್ಯಾಸ ದಿನೆ ದಿನೇ ಹೆಚ್ಚೆ ಆಗಿತ್ತು. 4 ಗಂಟೆಗೆ ಆರಂಭವಾಗುವ ಹೋಟೆಲ್ ಸುಮಾರು 9 ಗಂಟೆಗೆಲ್ಲ ಬಿರಿಯಾನಿ ಖಾಲಿಯಾಗಿ ಹೋಟೆಲ್ ಬಂದ್ ಆಗುತ್ತಿತ್ತು. ಹೋಟೆಲ್‌ಗಳ ಮುಂದೆ ಜನಸಾಗರವೇ ಕಂಡುಬರುತ್ತಿತ್ತು.ಸುಮಾರು ಅರ್ಧ ಕಿ.ಮೀ ಉದ್ದಕ್ಕೂ ಗ್ರಾಹಕರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಆದರೆ ಕಳೆದೊಂದು ವಾರದಿಂದ ಇಂಥ ದೃಶ್ಯಗಳಿಗೆ ಖಾಕಿ ಬ್ರೇಕ್ ಹಾಕಿದೆ.
ೇಮಸ್ ಆಗಿದ್ದ ಹೋಟೆಲ್‌ಗಳು: ಹೊಸಕೋಟೆಯಲ್ಲಿ ಆನಂದ್ ಬಿರಿಯಾನಿ, ಅಕ್ಷಯ್ ಧಮ್ ಬಿರಿಯಾನಿ, ಮಣಿ ಬಿರಿಯಾನಿ ಸೇರಿ ಅನೇಕ ಬಿರಿಯಾನಿ ಹೋಟೆಲ್‌ಗಳು ಪ್ರಸಿದ್ಧಿ ಪಡೆದಿವೆ. ಎಲ್ಲ ಹೋಟೆಲ್‌ಗಳಲ್ಲಿ ಪೈಪೋಟಿಗೆ ಬಿದ್ದಂತೆ ವ್ಯಾಪಾರ ನಡೆಯುತ್ತದೆ ಎಲ್ಲ ಹೋಟೆಲ್‌ಗಳ ಮುಂದೆಯೂ ಗ್ರಾಹಕರ ದಂಡೇ ನೆರೆದಿರುತ್ತದೆ, ಪೊಲೀಸರ ಆದೇಶದ ಮೇರೆಗೆ ವೇಳಾಪಟ್ಟಿ ಬದಲಾಗಿದ್ದು ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ನಿಷೇಧಕ್ಕೆ ಕಾರಣವೇನು: ಬಿರಿಯಾನಿ ತಿನ್ನುವ ಆಸೆಯಿಂದ ಜನ ಮಧ್ಯರಾತ್ರಿಯಿಂದಲೇ ಪ್ರಯಾಣ ಮಾಡುತ್ತಿದ್ದಾರೆ. ಕೆಲವರು ಲಾಂಗ್ ಡ್ರೈವ್, ಜಾಲಿ ರೈಡ್ ಹೆಸರಲ್ಲಿ ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಇದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಮುಂಜಾನೆಯೇ ಜನದಟ್ಟಣೆ ಕೂಡ ಕಂಡುಬರುತ್ತಿದೆ. ಈ ಎಲ್ಲದಕ್ಕೂ ಕಡಿವಾಣ ಹಾಕುವ ಉದ್ದೇಶದಿಂದ 4 ಗಂಟೆಗೆ ಬಿರಿಯಾನಿ ಮಾರಾಟ ಮಾಡದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಪೊಲೀಸರಿಂದ ಭದ್ರತೆ ಪಾಠ: ಬಿರಿಯಾನಿ ಹೋಟೆಲ್‌ಗೆ ವೇಳಾಪಟ್ಟಿ ನೀಡುವುದರ ಜತೆಗೆ ಹೋಟೆಲ್ ಮಾಲೀಕರಿಗೆ ಕಾನೂನು ಪಾಠ ಮಾಡಿರುವ ಪೊಲೀಸರು ಭದ್ರತೆ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ. ಹೋಟೆಲ್‌ಗಳ ಮುಂದೆ ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಕಡಿವಾಣ ಹಾಕಬೇಕು, ಜನದಟ್ಟಣೆ ಕಡೆ ನಿಗಾ ಇರಬೇಕು ಕಡ್ಡಾಯವಾಗಿ ಸಿಸಿಕ್ಯಾಮರಾ ರನ್ನಿಂಗ್ ಇರಬೇಕು ಸೇರಿ ಹಲವು ಸೂಚನೆ ನೀಡಿದ್ದಾರೆ.
ಮುಂಜಾನೆ 4 ಗಂಟೆಗೆ ಬಿರಿಯಾನಿ ಹೋಟೆಲ್ ಆರಂಭದಿಂದ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತಿತ್ತು. ಅಪಘಾತಗಳ ನಿಯಂತ್ರಣ ಸೇರಿ ಕಾನೂನು ಸುಭದ್ರತೆ ಕಾರಣಕ್ಕೆ ಡಿವೈಎಸ್‌ಪಿ ಮಹೇಶ್ ಅವರೊಂದಿಗೆ ಚರ್ಚಿಸಿ ಈ ನಿಯಮ ರೂಪಿಸಲಾಗಿದೆ. ಇದಕ್ಕೆ ಬಿರಿಯಾನಿ ಹೋಟೆಲ್ ಮಾಲೀಕರು ಸ್ಪಂದಿಸಿದ್ದಾರೆ. ಕಾನೂನು ಸುವ್ಯವಸ್ಥೆ ಎಲ್ಲರ ಹೊಣೆಯಾಗಿದೆ.
ಬಿ.ಟಿ.ಗೋವಿಂದ್, ಇನ್‌ಸ್ೆಕ್ಟರ್ ಹೊಸಕೋಟೆ
ಕಾನೂನು ಸುವ್ಯವಸ್ಥೆ ಕಾರಣಕ್ಕೆ ಪೊಲೀಸರು ಸೂಚನೆ ನೀಡಿದ್ದು ಮುಂಜಾನೆ 4 ಗಂಟೆಗೆ ಬದಲಿಗೆ 6 ಗಂಟೆಗೆ ಹೋಟೆಲ್ ಆರಂಭಿಸಲಾಗುತ್ತಿದೆ, ಇದರಿಂದ ಸಾಮಾನ್ಯವಾಗಿ ವ್ಯಾಪಾರಕ್ಕೆ ಸ್ವಲ್ಪ ಮಟ್ಟಿಗೆ ನಷ್ಟವಾಗಿದೆ. ಆದರೆ ಪೊಲೀಸರ ಸೂಚನೆ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ಕಳೆದ ಒಂದು ವಾರದಿಂದ ವೇಳಾಪಟ್ಟಿ ಬದಲಾಗಿದೆ. ಈ ಬಗ್ಗೆ ಹೋಟೆಲ್ ಮುಂದೆ ಸೂಚನಾ ಲಕ ಹಾಕಿದ್ದೇವೆ.
ಆನಂದ್, ಬಿರಿಯಾನಿ ಹೋಟೆಲ್ ಮಾಲೀಕ ಹೊಸಕೋಟೆ