20 ಮೊಬೈಲ್‌ಗಳನ್ನು ವಾರಸುದಾರರಿಗೆ ಮರಳಿಸಿದ ಪೊಲೀಸರು

Police returned mobiles to heirs
Published on

ಕುಮಟಾ: ತಾಲೂಕಿನಲ್ಲಿ ಹಲವು ಪ್ರಕರಣಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ 20 ಮೊಬೈಲ್‌ಗಳನ್ನು ಪತ್ತೆಹಚ್ಚಿದ ಪೊಲೀಸರು ಡಿವೈಎಸ್‌ಪಿ ಕೆ. ಶ್ರೀಕಾಂತ ಮೂಲಕ ಮೊಬೈಲುಗಳ ಅಸಲು ವಾರಸುದಾರರಿಗೆ ಕುಮಟಾ ಠಾಣೆಯಲ್ಲಿ ಇತ್ತೀಚೆಗೆ ಹಸ್ತಾಂತರಿಸಿದರು.
ಕಳೆದ ತಿಂಗಳು ಹೊಲನಗದ್ದೆಯ ಅನಂತ ಹರಿಕಾಂತ, ಹೆಗಡೆಯ ರಮೇಶ ಪಟಗಾರ ಇನ್ನಿತರರು ತಮ್ಮ ಮೊಬೈಲ್ ಕಳೆದುಕೊಂಡಿದ್ದು ಮೊಬೈಲ್ ಕಳ್ಳತನವಾದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಅಪರಾಧ ಪತ್ತೆ ವಿಭಾಗದ ಪೊಲೀಸರು ಕಳುವಾಗಿದ್ದ ಮೊಬೈಲ್ ಹುಡುಕಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಿಪಿಐ ತಿಮ್ಮಪ್ಪ ನಾಯಕ, ಪಿಎಸ್‌ಐ ನವೀನ ನಾಯ್ಕ, ಸುನೀಲ್ ಬಂಡಿವಡ್ಡರ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net