

ಕಾರವಾರ: ಮಂಗಳೂರು, ಕಾರವಾರ ವಿವಿಧೆಡೆ ನಡು ಬೀದಿಯಲ್ಲಿ ಕೊಲೆಗಳು ನಡೆಯುತ್ತಿರುವುದರಿಂದ ಪೊಲೀಸರು ಎಚ್ಚೆತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಬುಧವಾರ ರಾತ್ರಿ ನಗರದ ವಿವಿಧ ರೌಡಿ ಶೀಟರ್‌ಗಳ ಮನೆಗೆ ಸ್ವತಃ ಪೊಲೀಸ್ ಅಽಕಾರಿಗಳು ತೆರಳಿ ಅವರಿಂದ ಮುಚ್ಚಳಿಗೆ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಬಂದಿದ್ದಾರೆ.
ಏ.19 ರಂದು ಕಾರವಾರದ ಸಂತೆ ಮಾರುಕಟ್ಟೆಯಲ್ಲಿ ನಗರಸಭೆ ಮಾಜಿ ಸದಸ್ಯ, ರೌಡಿ ಶೀಟರ್ ಸತೀಶ ಕೊಳಂಬಕರ್ ಹತ್ಯೆ ನಡೆದಿತ್ತು. ಅದಾಗಿ ಒಂದೇ ವಾರದಲ್ಲಿ ಮಂಗಳೂರಿನಲ್ಲಿ ಹಿಂದು ಸಂಘಟನೆ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ ಶೆಟ್ಟಿ ಕೊಲೆ ನಡೆದಿದೆ. ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಈ ಹಿಂದೆಲ್ಲ ಪೊಲೀಸ್ ಠಾಣೆಗಳ ಮೆಟ್ಟಿಲು ಹತ್ತಿದವರೇ ಆಗಿದ್ದಾರೆ. ಹಾಗಾಗಿ ಪೊಲೀಸರು ರೌಡಿಶೀಟರ್‌ಗಳ ಅಟ್ಟಹಾಸ ನಿಯಂತ್ರಿಸಲು ಮುಂದಾಗಿದ್ದಾರೆ.
ಶಹರ ಠಾಣೆ ಸಿಪಿಐ ರಮೇಶ ಹೂಗಾರ ಹಾಗೂ ರೈಫಲ್ ಹಿಡಿದ ಸಿಬ್ಬಂದಿ ನಗರದ ವಿವಿಧ ರೌಡಿ ಶೀಟರ್‌ಗಳ ಮನೆಗೆ ರಾತ್ರಿ ತೆರಳಿ ಪರಿಶೀಲನೆ ನಡೆಸಿದರು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದರು. ವಾರದ ಹಿಂದೆ ಪೊಲೀಸ್ ಗ್ರೌಂಡ್‌ನಲ್ಲಿ ಎಎಸ್‌ಪಿ ಜಗದೀಶ ಎಂ ಹಾಗೂ ಅಽಕಾರಿಗಳು ನಗರದ ರೌಡಿ ಶೀಟರ್‌ಗಳ ಪರೇಡ್ ನಡೆಸಿ, ಎಚ್ಚರಿಕೆ ನೀಡಿದ್ದರು. ಇಷ್ಟೇ ಅಲ್ಲದೇ, ಮಂಗಳವಾರ ಹಾಗೂ ಬುಧವಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್ ಅಽಕಾರಿಗಳು ಹಾಗೂ ಸಿಬ್ಬಂದಿ ಒಟ್ಟಿಗೆ ನಡೆದು, ನಗರದಲ್ಲಿ ಗಸ್ತು ನಡೆಸಿದರು.