

ಬೈಲಹೊಂಗಲ: ಅಪರಾಧ ತಡೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಪಟ್ಟಣದಲ್ಲಿ ಪೋಲೀಸರು ಶನಿವಾರ ರೌಡಿಶೀಟರ್ಗಳ ಮನೆ ಪರಿಶೀಲಿಸಿ ಖಡಕ್ ಎಚ್ಚರಿಕೆ ನೀಡಿದರು. ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಸಿಪಿಐ ಪಿ.ಎ.ಸಾಲಿಮಠ ನೇತೃತ್ವದಲ್ಲಿ ಪಿಎಸ್ಐಗಳಾದ ಎ್.ವೈ.ಮಲ್ಲೂರ, ಪಿ.ವೈ. ವಾಲೀಕಾರ ಹಾಗೂ ಸಿಬ್ಬಂದಿ ರೌಡಿಶೀಟರ್ಗಳ ಮನೆಗಳಲ್ಲಿ ತಪಾಸಣೆ ನಡೆಸಿದರು. ಪಟ್ಟಣದಲ್ಲಿ ಒಟ್ಟು 40 ರೌಡಿಶೀಟರ್ಗಳಿದ್ದ್ದು, 20 ಕ್ಕಿಂತ ಅಧಿಕ ರೌಡಿಶೀಟರ್ಗಳ ಮನೆಗಳಲ್ಲಿ ಶೋಧ ನಡೆಸಿದ ಪೊಲೀಸರು, ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪದೇ ಪದೆ ದುಷತ್ಯಗಳಲ್ಲಿ ಭಾಗಿಯಾಗುತ್ತಿರುವ ಟನೆ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಯಾವುದೇ ಮಾರಕಾಸ್ತ್ರ ಪತ್ತೆಯಾಗಿಲ್ಲ ಎಂದು ಪೋಲಿಸ್ ಮೂಲಗಳು ತಿಳಿಸಿವೆ.