

ಶಿವಮೊಗ್ಗ: ಅಕ್ರಮ ಬಡ್ಡಿ ವ್ಯವಹಾರ ನಡೆಸುವವರ ಮೇಲೆ ಶಿವಮೊಗ್ಗ ಪೊಲೀಸರು ಮಂಗಳವಾರ ದಾಳಿ ನಡೆಸಿ ಅಪಾರ ಪ್ರಮಾಣದ ಹಣ, ಪ್ರಾಮಿಸರಿ ನೋಟ್‌ಗಳು, ಖಾಲಿ ಚೆಕ್‌ಗಳು, ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. 9 ಕಡೆಗಳಲ್ಲಿ ನಡೆಸಿದ ದಾಳಿಯಲ್ಲಿ 39 ಲಕ್ಷ ರೂ. ಪತ್ತೆಯಾಗಿದೆ.
24 ಮೊಬೈಲ್‌ಗಳು, ಎರಡು ಲ್ಯಾಪ್‌ಟಾಪ್‌ಗಳು, 72 ಚೆಕ್‌ಗಳು, 19 ವಾಹನಗಳ ಆರ್‌ಸಿ, ಏಳು ವೆಹಿಕಲ್ ಬಾಂಡ್‌ಗಳು, 2 ಫಾರ್ಮ್ ನಂ.29, 30 ಮತ್ತು ಅಗ್ರಿಮೆಂಟ್ ಕಾಪಿಗಳು, ಪಾಸ್‌ಬುಕ್, ಸೇಲ್ ಡೀಡ್, ಪಹಣಿ, 29 ಬೈಕ್‌ಗಳು ಮತ್ತು 2 ಕಾರುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆೆ.
ಅಣ್ಣಾನಗರ, ಮಾರ್ನಾಮಿಬೈಲು, ಕಾಮಾಕ್ಷಿ ಬೀದಿ, ವಿದ್ಯಾನಗರ, ಕಾಶಿಪುರ, ಕೋಟೆಗಂಗೂರು, ಬಸವನಗುಡಿ, ಗೋಪಶೆಟ್ಟಿಕೊಪ್ಪ, ಚಾಲುಕ್ಯನಗರ, ಇಂದಿರಾ ಬಡಾವಣೆ, ಗುರುಪುರದಲ್ಲಿ ದಾಳಿ ನಡೆಸಲಾಯಿತು.