

ಮುಳಬಾಗಿಲು: ಕೆಮಿಕಲ್ ಮಿಶ್ರಿತ ಹಾಲು ತಯಾರಿಸುತ್ತಿದ್ದಾರೆ ಎಂಬ ದೂರಿನ ಮೇಲೆ ತಾಲೂಕಿನ ನಂಗಲಿ ಸಮೀಪದ ಸವಟೂರು ಗ್ರಾಮದ ಖಾಸಗಿ ಡೇರಿ ಮೇಲೆ ವಿಶ್ವ ಹಾಲು ದಿನಾಚರಣೆ ದಿನವೇ ಮುಳಬಾಗಿಲು ಪೊಲೀಸ್ ಉಪ ವಿಭಾಗದ ಉಪಾಧೀಕ್ಷಕ ಡಿ.ಸಿ.ನಂದಕುಮಾರ್ ಮತ್ತು ಸಿಬ್ಬಂದಿ ದಾಳಿ ಮಾಡಿ ಹಾಲಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟು, ನಂಗಲಿ ಠಾಣೆಯಲ್ಲಿ ಎನ್ಸಿಆರ್ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಹಾಲಿನ ಮಾದರಿ ಆಹಾರ ಇಲಾಖೆ ಅಧಿಕಾರಿಳಿಗೆ ನೀಡಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಸವಟೂರು ಗ್ರಾಮದ ಹರೀಶ್ ರೆಡ್ಡಿ ಅವರ ಖಾಸಗಿ ಹಾಲಿನ ಡೇರಿಯಿಂದ ಆಂಧ್ರದ ಖಾಸಗಿ (ತಿರುಮಲ) ಹಾಲಿನ ಡೇರಿಗೆ ಹಾಲು ಸರಬರಾಜು ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರು ಕಲೆ ಹಾಕಿ ಕೆಮಿಕಲ್ ಹಾಲು ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ಸೇರಿ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡರು.