ಮೀಟರ್ ಬಡ್ಡಿ ಕುಳಗಳಿಗೆ ಶಾಕ್

images.jpeg
Published on

ಮುಂಡಗೋಡ: ಮೀಟರ್ ಬಡ್ಡಿ ದಂಧೆ ನಡೆಸುವ ಕುಳಗಳ ಮನೆಗಳ ಮೇಲೆ ಸೋಮವಾರ ತಡ ರಾತ್ರೀ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪೊಲೀಸರು ದಾಳಿ ನಡೆಸಿ ಹತ್ತಕ್ಕೂ ಹೆಚ್ಚು ಮೀಟರ್ ಬಡ್ಡಿ ದಂಧೆ ನಡೆಸುವವರನ್ನು ಬಂಧಿಸಿ ಕಾರವಾರಕ್ಕೆ ಕರೆದುಕೊಂಡು ಹೋದ ಘಟನೆ ಜರುಗಿದೆ.

ತಾಲೂಕಿನಲ್ಲಿ ಹಲವು ತಿಂಗಳುಗಳಿಂದ ಮೀಟರ್ ಬಡ್ಡಿ ದಂಧೆ ಜೋರಾಗಿತ್ತು ಬಹತೇಕ ಜನರು ಬಡ್ಡಿ ದಂಧೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರಿಗೆ ದೂರು ಸಲ್ಲಿಸಿದ್ದರು.

ಸೋಮವಾರ ರಾತ್ರಿ 1ಗಂಟೆ ಸುಮಾರಿಗೆ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಮನೆಗಳಲ್ಲಿ ಪರೀಶೀಲನೆ ನಡೆಸಿದ ಪೊಲೀಸರು ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ್ದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪ್ರತ್ಯೇಕ ದಾಳಿ ನಡೆಸಿ ಮೀಟರ್ ಬಡ್ಡಿ ದಂಧೆ ನಡೆಸುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೀಟರ್ ಬಡ್ಡಿ ದಂಧೆ ನಡೆಸುವ ಪ್ರಮುಖ ಆರೋಪಿ ಕಿಂಗ್ ಪಿನ್ ಮನೆಗೆ ಬೀಗ ಜಡಿದು ಕುಟುಂಬದವರ ಸಮೇತ ಪರಾರಿ ಆಗಿದ್ದಾನೆ ದಾಳಿಯ ಮಾಹಿತಿ ಸೋರಿಕೆ ಆಗಿರುವ ಸಂಶಯ ವ್ಯಕ್ತವಾಗಿದೆ. ಎಲ್ಲರನ್ನೂ ಕಾರವಾರಕ್ಕೆ ಕರೆದುಕೊಂಡು ಹೋದ ಪೊಲೀಸರು.
ಎಸ್ಪಿ ಕಾರ್ಯ ಶೈಲಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ತಾಲೂಕಿನ ಜನತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net