

ಮೈಸೂರು: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಫೆ.8 ರಂದು ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ನಗರದ ಕಳರಿ ಸಾಧನ ಮೈಸೂರು ಅಕಾಡೆಮಿ ವಿದ್ಯಾರ್ಥಿಗಳಾದ ವಿ.ಪ್ರಕೃತಿ (9 ವರ್ಷ) ಹಾಗೂ ವಿ.ನಮ್ರತಾ (13) ಭಾಗಿಯಾಗಲಿದ್ದಾರೆ.
ಭಾರತೀಯ ಸಮರ ಕಲೆಯಾದ ಕಳರಿಪಯಟ್ಟು ಕ್ರೀಡೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಎಂದು ತರಬೇತುದಾರ ವರುಣ್ ಯಾದವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದಯಗಿರಿ ನಿವಾಸಿಗಳಾದ ಪ್ರಕೃತಿ ಮತ್ತು ನಮ್ರತಾ ಅವರು ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಕಳರಿ ಪಯಟ್ಟು ಕ್ರೀಡೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಮೈಸೂರಿನ ಮೊದಲ ವಿದ್ಯಾರ್ಥಿಗಳಾಗಿದ್ದಾರೆ ಎಂದರು. ಎರಡೂವರೆ ವರ್ಷದಿಂದ ಕಳರಿ ಪಯಟ್ಟು ಕ್ರೀಡೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಕಳರಿ ಪಯಟ್ಟು ಚಾಂಪಿಯನ್ ಶಿಪ್‌ಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.