ಹಾರಂಗಿ ಜಲಾಶಯಕ್ಕೆ ಪೊಲೀಸರಿಂದ ಭದ್ರತೆ

harangi
Published on

ಕೂಡಿಗೆ: ಪಾಕ್ ಉಗ್ರರ ನೆಲೆ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಡ್ಯಾಂಗಳಲ್ಲಿ ಭದ್ರತೆಗೆ ನೀಡಲು ಕೇಂದ್ರ ಸೂಚನೆ ನೀಡಿದ್ದು, ಅದರಂತೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದಲ್ಲಿರುವ ಮುಖ್ಯ ಹಾರಂಗಿ ಜಲಾನಯನಕ್ಕೂ ಗುರುವಾರ ಹೆಚ್ಚಿನ ಭದ್ರತೆ ನೀಡಲಾಗಿದೆ.

ಮೊದಲಿದ್ದ ಭದ್ರತೆಯನ್ನೂ ಮತ್ತಷ್ಟು ಹೆಚ್ಚು ಮಾಡಲಾಗಿದ್ದು, ಡ್ಯಾಂ ಭದ್ರತಾ ಪಡೆ ಜೊತೆ ಸ್ಥಳೀಯ ಪೋಲಿಸ್ ಸೇರಿದಂತೆ ಸುಮಾರು ೨೪ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಜೆಯ ಮೇಲೆ ತೆರಳಿದ ಪೊಲೀಸ್ ಸಿಬ್ಬಂದಿಗಳನ್ನು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಅದೇಶ ಹೊರಡಲಾಗಿದೆ. ಎಲ್ಲಾ ಪೋಲಿಸ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂರು ಪಾಳೆಯದಲ್ಲೂ ಕಾವಲು ಕಾಯುವಂತೆ ಸಿಬ್ಬಂದಿ ನೀಯೋಜನೆ ಮಾಡಲಾಗಿದೆ.

ಡ್ಯಾಂಗೆ ಬರುವ ಪ್ರವಾಸಿಗರನ್ನು ಸಂಪೂರ್ಣ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಹಾರಂಗಿ ಜಲಾಶಯಕ್ಕೆ ಇಲಾಖೆಯ ಇಂಜಿನಿಯರ್‌ಗಳು ಭೇಟಿ ನೀಡುತ್ತಿದ್ದಾರೆ. ಭದ್ರತಾ ದೃಷ್ಟಿಯಿಂದ ಡ್ಯಾಂನ ಡ್ರೈನೈಜ್ ಗ್ಯಾಲರಿಯನ್ನು ಅಧಿಕಾರಿಗಳು ಪೋಲಿಸ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ಇಲಾಖೆಯ ಆಧಿಕಾರಿ ಮಂಜುನಾಥ್, ಮುಖ್ಯ ಇಂಜಿನಿಯರ್ ರಘುಪತಿ, ಹಾರಂಗಿ ಅಧೀಕ್ಷಕ ಇಂಜಿನಿಯರ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳಿಂದ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net