

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ವಿವಿಧ ವಿಷಯಗಳ ಪದವಿ, ಸ್ನಾತಕೋತ್ತರ ಪದವೀಧರರು ಸೇರುತ್ತಿದ್ದಾರೆ. ಅವರಿಗೆ ಅರಸ್ಥರು, ಅನರಸ್ಥರು ಎಂಬ ಬೇಧವಿಲ್ಲದೆ ಬಹುತೇಕರನ್ನು ವಂಚಿಸುತ್ತಿರುವ ಸೈಬರ್ ಕೆಂ ಮತ್ತು ಅಪರಾಧ ಪ್ರಕರಣಗಳನ್ನು ಶಿೆಗೆ ಒಳಪಡಿಸಲು ಅಗತ್ಯವಿರುವ ಸಾ ಸಂಗ್ರಹ, ತನಿಖೆಗೆ ಅಗತ್ಯವಿರುವ ತಾಂತ್ರಿಕ ಜ್ಞಾನದ ತರಬೇತಿ ನೀಡಬೇಕು ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಎ.ಎಸ್. ಮಗೆಣ್ಣವರ ಹೇಳಿದರು.
ನಗರದ ಪೊಲೀಸ್ ಇಲಾಖೆ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕವಾಯತು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಮತ್ತು ಸೇವಾ ನಿವೃತ್ತರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿದರೆ ಸಾಲದು. ಆರೋಪಿಗಳು ಮಾಡಿದ ಅಪರಾಧ ಸಾಬೀತಾಗುವವರೆಗೆ ಪಾಲೋಅಪ್ ಮಾಡಬೇಕು. ಜನರ ಸಹಕಾರವಿಲ್ಲದೆ ನಮ್ಮ ಕರ್ತವ್ಯ ರ್ಪೂಣವಾಗುವುದಿಲ್ಲ. ಸಾರ್ವಜನಿಕರ ಶಾಂತಿ, ಸುರತೆ ಮತ್ತು ಸುವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆ ಕಾಳಜಿ ವಹಿಸುವುದರಿಂದ ಜನರೊಂದಿಗೆ ಇಲಾಖೆ ಸಂಬಂಧ ಉತ್ತಮವಾಗಿ ಬೆಳೆಯುತ್ತದೆ ಎಂದರು.
ಪರೇಡ್ ಕಮಾಂಡರ್ ವಿಠ್ಠಲ ಕೊಕಟನೂರ ಹಾಗೂ ಆರ್.ಎಸ್.ಗುಡನಟ್ಟಿ ನಾಯಕತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. 2023ರ ಏಪ್ರಿಲ್ನಿಂದ 2024ರ ಮಾರ್ಚ್ ಅವಧಿಯಲ್ಲಿ ಸೇವಾ ನಿವೃತ್ತರಾದ ಜಿಲ್ಲೆಯ ವಿವಿಧ ಠಾಣೆ ಅಧಿಕಾರಿಗಳಾದ ಮಿಶ್ರಿಕೋಟಿ, ಎಂ.ಎ.ಅಧೋನಿ ಮತ್ತು ಕೆ.ಬಿ.ಗುಡಗೇರಿ, ಆರ್.ಎಸ್.ಜಾಧವ, ಬಿ.ಎಂ. ಕೆರಕನವರ, ಎಂ.ಎಚ್.ಕವಲೂರ, ಎಸ್.ವಿ.ಚಂಗಳಿ, ಬಿ.ಎಲ್.ಬಳಿಗೇರ ಮತ್ತು ಎಸ್.ಕೆ.ಪೇಟೆ ಅವರಿಗೆ ಸನ್ಮಾನಿಸಲಾಯಿತು.
ಕೇಂದ್ರ ಕಾರಾಗೃಹ ಅಧೀಕ್ಷಕ ಡಾ.ಕೆ.ಎಂ.ಮರಿಗೌಡ, ಜಿಲ್ಲೆಯ ಹಿರಿಯ ಪೊಲೀಸ ಅಧಿಕಾರಿಗಳು, ವಿವಿಧ ಠಾಣೆಗಳ ಸಿಪಿಐ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಇತರರು ಇದ್ದರು.
ಜಿಲ್ಲಾ ಪೊಲೀಸ್ ಅಧೀಕ ಡಾ.ಗೋಪಾಲ ಬ್ಯಾಕೋಡ ಸ್ವಾಗತಿಸಿದರು. ಮಾಯಾ ರಾಮನ್ ನಿರೂಪಿಸಿದರು.ನಾರಾಯಣ ಭರಮನಿ ವಂದಿಸಿದರು.