

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಹಿಳೆಯ ಶವವನ್ನು ಬುಧವಾರ ಪೊಲೀಸರು ಚಾಮರಾಜನಗರದಲ್ಲಿ ಅಂತ್ಯಸಂಸ್ಕಾರ ನಡೆಸಿದರು.
ಮಂಡ್ಯದ ಮಂಜುಳಾ (55) ಮೃತಪಟ್ಟಿದ್ದ ಮಹಿಳೆ. ಇವರು ಜೂ.13ರಂದು ಮ.ಬೆಟ್ಟದ ರಂಗಮಂದಿರದಲ್ಲಿ ನಿತ್ರಾಣವಾಗಿದ್ದರು. ಈ ವೇಳೆ ಮ.ಬೆಟ್ಟ ಪೊಲೀಸರು ಚಾ.ನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಮಂಜುಳಾ ಜೂ.15 ರಂದು ಮೃಪಟ್ಟಿದ್ದರು. ಈ ವೇಳೆ ಆಧಾರ್ ಕಾರ್ಡ್‌ನಿಂದ ವಿಳಾಸ ಪತ್ತೆ ಹಚ್ಚಿದ ಪೊಲೀಸರು ಮಂಡ್ಯಕ್ಕೆ ತೆರಳಿ ಪರಿಶೀಲಿಸಿದಾಗ ಸಹೋದರ ಅಸಹಾಯಕನಾಗಿದ್ದನು. ಇದನ್ನು ಅರಿತ ಪೊಲೀಸರು ಅನುಮತಿ ಪಡೆದು ಮೃತದೇಹವನ್ನು ಚಾ.ನಗರ ಸಮೀಪದ ಯಡಬೆಟ್ಟದಲ್ಲಿ ಅಂತ್ಯ ಸಂಸ್ಕಾರ ನಡೆಸಿದರು.