ಸಾಗರದಲ್ಲಿ ಪೊಲೀಸ್ ಪಥಸಂಚಲನ

19sgr6
ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಸಾಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಇಲಾಖೆಯಿಂದ ಪಥಸಂಚಲನ ನಡೆಸಲಾಯಿತು. ಗೋಪಾಲಕೃಷ್ಣ ನಾಯಕ್, ಸೀತಾರಾಮ್, ಮಹಾಬಲೇಶ್ವರ ನಾಯ್ಕ, ನಾಗರಾಜ್ ಇತರರಿದ್ದರು.
Published on

ಸಾಗರ: ಸಾಗರ ತಾಲೂಕಿನಾದ್ಯಂತ ಒಟ್ಟು 371 ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಿದ್ದು ಸಾಗರ ನಗರದಲ್ಲೇ 41 ಕಡೆ ಗಣಪತಿ ಪ್ರತಿಷ್ಠಾಪಿಸಲಾಗಿದೆ. ರಕ್ಷಣಾ ಇಲಾಖೆಯಿಂದ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದ್ದು ಸೂಕ್ತ ಭದ್ರತೆ ಸಂಬಂಧಿಸಿ ಗೃಹರಕ್ಷಕ ದಳ ಮತ್ತು ಪೊಲೀಸ್ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸ್ ಇಲಾಖೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಲಾಯಿತು. ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಸಿಪಿಐ ಸೀತಾರಾಮ್, ಮಹಾಬಲೇಶ್ವರ ನಾಯ್ಕ, ಸಬ್ ಇನ್ಸ್‌ಪೆಕ್ಟರ್ ನಾಗರಾಜ್, ನಾರಾಯಣ ಮಧುಗಿರಿ ಇತರರಿದ್ದರು. ಪಥ ಸಂಚಲನದಲ್ಲಿ 300ಕ್ಕೂ ಹೆಚ್ಚು ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net