

ಭಟ್ಕಳ ಪಹಲ್ಗಾಮ್ಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಮುರ್ಡೆಶ್ವರ ಬೀಚ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೈಫ್ಗಾರ್ಡ್ ಹಾಗೂ ಮುರ್ಡೆಶ್ವರ ಸಮುದ್ರದ ಪಕ್ಕದಲ್ಲಿರುವ ಲಾಜ್ ಮಾಲೀಕರು ಹಾಗೂ ರೂಮ್ ಬಾಯ್್ಸಳನ್ನು ಕರೆದು ಭಟ್ಕಳ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳಿಂದ ಸಭೆ ನಡೆಸಿ, ಯಾವುದೇ ಅಪರಿಚಿತ, ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಬೋಟ್ ಬಂದಲ್ಲಿ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಗೋಕರ್ಣ, ಕಾರವಾರ ಸೇರಿದಂತೆ ಎಲ್ಲ ಸಮುದ್ರ ತೀರಗಳಲ್ಲೂ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ಹೋಮ್ ಸ್ಟೇ ರೆಸಾರ್ಟ್ಗಳಲ್ಲಿ ಪ್ರವಾಸಿಗರ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಜಿಲ್ಲೆಯ ಹೋಟೆಲ್, ಲಾಜ್, ಹೋಂ ಸ್ಟೇಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಿದ್ದಾರೆ. ಹೊರ ರಾಜ್ಯ, ವಿದೇಶಿ ಪ್ರವಾಸಿಗರ ಮಾಹಿತಿಯನ್ನೂ ಪೊಲೀಸರು ಕಲೆಹಾಕಿದ್ದಾರೆ. ಕರಾವಳಿ ಸಮುದ್ರ ಭಾಗದಲ್ಲಿ ಕರಾವಳಿ ಕಾವಲುಪಡೆ, ಭಾರತೀಯ ಕೋಸ್ಟ್ಗಾರ್ಡ್ನಿಂದ ಕೂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಮುದ್ರ ಮಾರ್ಗದ ಮೂಲಕ ಶತ್ರುಗಳು ಒಳನುಗ್ಗದಂತೆ ತಡೆಯಲು ಸಮುದ್ರ ಮಾರ್ಗದಲ್ಲಿ ಬೋಟುಗಳ ದಾಖಲೆ ತಪಾಸಣೆ ಮಾಡುತ್ತಿದ್ದಾರೆ.